
ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ಥಾನದ ರಾಜವಂಶಸ್ಥೆ ತ್ರಿಷಿಕಾ ಅವರ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಗುರುವಾರ ನಡೆಯಿತು.
2016ರ ಜೂ 27 ರಂದು ಮೈಸೂರಿನ ಮಯೂರಿ ಕಲ್ಯಾಣ ಮಂಟಪದಲ್ಲಿ ತ್ರಿಷಿಕಾರವರನ್ನ ಯದುವೀರ್ ವಿವಾಹವಾಗಿದ್ದರು. ಈ ಬಾರಿ ಮೂರನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯದುವೀರ್ ದಂಪತಿಗೆ ಪುತ್ರ ಆದ್ಯವೀರ್ ಜೊತೆಯಾಗಿರುವುದು ಮತ್ತಷ್ಟು ಸಂತಸ ಹೆಚ್ಚಿಸಿದೆ.















