Wednesday, March 18, 2026
ಸುದ್ದಿ

ಅಂಬಿಕಾ ಮಹಾವಿದ್ಯಾಲಯದಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಜನೆಗೆ ಮುಕ್ತ ಅವಕಾಶ – ಕಹಳೆ ನ್ಯೂಸ್

ಇದೇ ಮೊದಲ ಬಾರಿಗೆ ದೇಶದಲ್ಲೇ ವಿಜ್ಞಾನ ವಿಭಾಗದಲ್ಲಿ ಆರಂಭವಾದ ತತ್ವಶಾಸ್ತ್ರ (ಫಿಲಾಸಫಿ) ಮತ್ತು ಕಲಾ ವಿಭಾಗದಲ್ಲಿ ಪ್ರಾರಂಭವಾದ ತತ್ವಶಾಸ್ತ್ರ(ಫಿಲಾಸಫಿ) ವಿಷಯದ ಅಧ್ಯಯನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲಾ ವಯೋಮಾನದವರಿಗೂ 3 ವರ್ಷಗಳ ಕಾಲ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ಶುಲ್ಕವಿಲ್ಲದೆ ಉಚಿತ ಶಿಕ್ಷಣವನ್ನು ಘೋಷಿಸಿಸಲಾಗಿದೆ. ಸಾರ್ವಜನಿಕರು ಇಚ್ಛಿಸಿದಲ್ಲಿ ಈ ವ್ಯವಸ್ಥೆಯಿಂದ ದೇಶದಲ್ಲೇ ಮೊದಲ ಬಿ.ಎಸ್ಸಿ ತತ್ವಶಾಸ್ತ್ರ ಪದವೀಧರ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ.

ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯದ ಅನುಮತಿಯೊಂದಿಗೆ ಪ್ರಾರಂಭವಾದ ಸಂಸ್ಥೆಯು ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ತತ್ವಶಾಸ್ತ್ರ(ಫಿಲಾಸಫಿ) ಎಂಬ ಸಂಯೋಜನೆಗಳು ಮತ್ತು ಕಲಾ ವಿಭಾಗದಲ್ಲಿ ಸಂಸ್ಕೃತ/ಕನ್ನಡ, ಮನಃಶಾಸ್ತ್ರ ಮತ್ತು ತತ್ವಶಾಸ್ತ್ರ(ಫಿಲಾಸಫಿ) ಎಂಬ ಸಂಯೋಜನೆಗಳೊಂದಿಗೆ ಮಾನ್ಯತೆಯನ್ನು ಪಡೆದಿರುತ್ತದೆ. ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ತತ್ವಶಾಸ್ತ್ರ(ಫಿಲಾಸಫಿ)ಯನ್ನು ಬಯಸಿದ ಎಲ್ಲಾ ಸಾರ್ವಜನಿಕ ಬಂಧುಗಳು 3 ವರ್ಷಗಳ ಕಾಲ ಉಚಿತ ಶಿಕ್ಷಣದ ಫಲಾನುಭವಿಗಳಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು