Wednesday, March 18, 2026
ಸುದ್ದಿ

ಫಿಲೋಮಿನಾದಲ್ಲಿ ವಾರ್ಷಿಕ ಸಂಚಿಕೆ ‘ಫಿಲೋಪ್ರಭ’ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಜೀವನದಲ್ಲಿ ವಿದ್ಯಾರ್ಥಿ ಬದುಕು ಅತ್ಯಂತ ಸ್ಮರಣೀಯವಾದುದು. ಈ ಹಂತದಲ್ಲಿ ಪಠ್ಯಾಧ್ಯಯನದೊಂದಿಗೆ ಬರವಣಿಗೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಅತಿ ಅಗತ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಅವರು ಕಾಲೇಜಿನ ಶೈಕ್ಷಣಿಕ ವರ್ಷ 2018-19ರ ಸಾಲಿನ ‘ಫಿಲೋಪ್ರಭ’ ವಾರ್ಷಿಕೆ ಸಂಚಿಕೆಯನ್ನು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಅನಾವರಣಗೊಳಿಸಿ, ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ವಿಪುಲ ಅವಕಾಶಗಳಿವೆ. ಸಂವಹನ ಮತ್ತು ಬರವಣಿಗೆ ಕಲೆಯು ಮುಂದಿನ ಬದುಕಿನ ದಿಕ್ಕನ್ನು ನಿರ್ಧರಿಸಬಲ್ಲವು. ತಮ್ಮ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ನಾನಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆ ಮೂಲಕ ಕಾಲೇಜಿನ ಸ್ಥಾನಮಾನವೂ ಎತ್ತರಕ್ಕೆ ಏರಲು ಸಾಧ್ಯವಾಗಬಲ್ಲುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಾರ್ಷಿಕ ಸಂಚಿಕೆ ಫಿಲೋಪ್ರಭದ ಇದರ ಸಹ ಸಂಪಾದಕ ಪ್ರೊ. ಗಣಪತಿ ಎಸ್ ಮಾತನಾಡಿ, ವಾರ್ಷಿಕ ಸಂಚಿಕೆಯು ಒಂದು ಸಂಸ್ಥೆಯ ಮುಖವಾಣಿಯಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಸಾಮಥ್ರ್ಯವನ್ನು ಉಪಯೋಗಿಸಿಕೊಂಡು ಮಹತ್ವಪೂರ್ಣ ಕೊಡುಗೆಯನ್ನು ನೀಡಿದಾಗ ವಾರ್ಷಿಕ ಸಂಚಿಕೆಯು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಸಂಚಿಕೆಯು ಉತ್ತಮವಾಗಿ ಮೂಡಿ ಬರಲು ಸಂಪಾದಕೀಯ ಮಂಡಳಿಯ ಎಲ್ಲಾ ಸದಸ್ಯರ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ವಿದ್ಯಾಥಿಗಳು ತಮ್ಮ ಜೀವನದಲ್ಲಿ ಶಿಸ್ತು, ದೃಢಸಂಕಲ್ಪ, ಆತ್ಮ ವಿಶ್ವಾಸ ಮುಂತಾದವುಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಯು ಉನ್ನತ ಮಟ್ಟದ ಸಾಧನೆಯನ್ನು ಮಾಡಲು ವಿದ್ಯಾರ್ಥಿ ಸಮುದಾಯದ ಪಾಲ್ಗೊಳ್ಳುವಿಕೆಯೂ ಪ್ರಾಮುಖ್ಯವಾದುದು ಎಂದರು.
ವಾರ್ಷಿಕೆ ಸಂಚಿಕೆಯ ಸಂಪಾದಕ ವಿನಯಚಂದ್ರ ಮಾಹಿತಿ ನೀಡುತ್ತಾ, ಫಿಲೋಪ್ರಭವು ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ವಿವಿಧ ವಿಷಯಗಳ ಕುರಿತು ಲೇಖನಗಳು, ಕವಿತೆಗಳು ಮತ್ತು ನಗೆಹನಿಗಳನ್ನು ಒಳಗೊಂಡಿದೆ. ಚಿತ್ರಗಳು, ಛಾಯಾಚಿತ್ರಗಳು, ವ್ಯಂಗ್ಯಚಿತ್ರಗಳು, ವ್ಯಕ್ತಿಚಿತ್ರಣ ಮುಂತಾದವುಗಳ ಮೂಲಕ ವಾರ್ಷಿಕ ಸಂಚಿಕೆಯು ಉತ್ತಮವಾಗಿ ಮೂಡಿ ಬರಲು ಸಾದ್ಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಕೆ ಚಂದ್ರಶೇಖರ ಮತ್ತು ಕ್ಷೇಮಪಾಲನಾಧಿಕಾರಿ ಭಾರತಿ ಎಸ್ ರೈ ಉಪಸ್ಥಿತರಿದ್ದರು.