
ಸುಳ್ಯ ಸಮೀಪದ ಹಳೆಗೇಟು ಎಂಬಲ್ಲಿ ಕಾರು ಮತ್ತು ರಿಕ್ಷಾ ಡಿಕ್ಕಿಯಾದ ಘಟನೆ ನಡೆದಿದೆ. ಕಾರಿಗೆ ರಿಕ್ಷಾ ತಾಗಿದ ಪರಿಣಾಮ ರಿಕ್ಷಾ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಹಿನ್ನಲೆಯಲ್ಲಿ ರಿಕ್ಷಾ ಚಾಲಕ ಪಂಜದ ಉಮೇಶ್ ಗಂಭೀರ ಗಾಯಗೊಂಡಿದ್ದಾರೆ. ಈತನನ್ನು ಚಿಕಿತ್ಸೆಗೆಂದು ಪುತ್ತೂರಿಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. ರಿಕ್ಷಾದಲ್ಲಿ ಇದ್ದ ಉಮೇಶ್ ಅವರ ಪತ್ನಿ ಕೃಷ್ಣ ಕುಮಾರಿ ಕೂಡಾ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ್ ಅವರ ಸಾವಿನ ಹಿನ್ನಲೆಯಲ್ಲಿ ಪಂಜ ಪೇಟೆಯಲ್ಲಿ ಅಂಗಡಿ ಮಾಲಿಕರು ಹಾಗೂ ರಿಕ್ಷಾ ಚಾಲಕರು ಶೋಕಾಚರಣೆ ಮಾಡಿದರು.














