
ಪುತ್ತೂರು: ತತ್ವ ಸ್ಕೂಲ್ ಆಫ್ ಆರ್ಟ್ ಇಂದು ಉದ್ಘಾಟನೆಗೊಂಡಿತು. ಪುತ್ತೂರಿನ ಬಾರೆಕೆರೆ ಬಳಿಯಿರುವ ವೆಂಕಟರಮಣ ಕಮ್ಯುನಿಟಿ ಹಾಲ್‍ನಲ್ಲಿ ಅಧಿಕೃತವಾಗಿ ಪ್ರಾರಂಭಗೊಂಡಿದೆ. ಈ ಕಾರ್ಯಕ್ರಮದಲ್ಲಿ ಶ್ರೀಗಣೇಶ್ ಕೆದಿಲಾಯ, ಎನ್ ಎಸ್ ಪುತ್ತೂರು, ಎಂಜಿಕೆ ಆಚಾರ್ಯ, ಸತೀಶ್ ಕುಮಾರ್ ರೈ, ಸಂಸ್ಥೆಯ ತರಬೇತುದಾರ ಟೀಲಾಕ್ಷ ಮತ್ತಿತ್ತರರು ಉಪಸ್ಥಿತರಿದ್ದರು. ಈ ಸಂಸ್ಥೆ ಪುತ್ತೂರಿನಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಡ್ರಾಯಿಂಗ್, ಪೈಂಟಿಂಗ್, ಜಲವರ್ಣ ಚಿತ್ರ, ಪೆನ್ಸಿಲ್ ಸ್ಕೆಚ್ ಹೀಗೆ ನಾನಾ ತರಗತಿಯನ್ನು ಹಮ್ಮಿಕೊಂಡಿದ್ದು ದಾಖಲಾತಿ ಆರಂಭಗೊಂಡಿದೆ.












