
ಪಶ್ಚಿಮ ಬಂಗಾಲದಲ್ಲಿ ರಾಜಕೀಯ ಘರ್ಷಣೆಗಳು ಮುಂದುವರಿದಿದ್ದು, ದಿನಕ್ಕೊಂದರಂತೆ ಹತ್ಯೆಗಳು ವರದಿಯಾಗುತ್ತಿವೆ. ಕೂಛ ಬೆಹಾರ್‍ನ ದಿನ್ಹಾಟಾದಲ್ಲಿ ಬುಧವಾರ ರಾತ್ರಿ ಟಿಎಂಸಿ ಕಾರ್ಯಕರ್ತನೊಬ್ಬನನ್ನು ಹತ್ಯೆಗೈಯಲಾಗಿದೆ.
ಅಜೀಜ್ ಅಲಿ ಎನ್ನುವ ಟಿಎಂಸಿ ಕಾರ್ಯಕರ್ತ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಅಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಡಂ ಡಂ ನಲ್ಲಿ ಟಿಎಂಸಿ ನಾಯಕ ನಿರ್ಮಲ್ ಖಂಡು ಅವರ ಹತ್ಯೆ ನಡೆದ ಬೆನ್ನಲ್ಲೇ ಈ ಹತ್ಯೆ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.















