Wednesday, March 18, 2026
ಸುದ್ದಿ

ಗಿಡ ನೆಟ್ಟು ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿ – ಕಹಳೆ ನ್ಯೂಸ್

ದಾಂಪತ್ಯ ಜೀವನದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸದೆ ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ ಪುತ್ತೂರಿನ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ – ಜಯ ಕೃಷ್ಣಮೂರ್ತಿ ದಂಪತಿ.

ಕಳೆದ ವರ್ಷ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಮರಗಳ ತೆರವು ನಡೆದ ವೇಳೆ ಕೆಲವು ವಿದ್ಯಾರ್ಥಿನಿಯರು, ಮರಗಳನ್ನು ತೆರವು ಮಾಡದಂತೆ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಬಳಿ ಮನವಿ ಮಾಡಿದ್ದರು. ಆದರೆ ರಸ್ತೆ ಅಗಲೀಕರಣ ವೇಳೆ ಮರಗಳನ್ನು ತೆರವುಗೊಳಿಸುವುದು ಅನಿವಾರ್ಯವಾದ್ದರಿಂದ ವಿದ್ಯಾರ್ಥಿನಿಯರಿಗೆ ಉತ್ತಮ ಜಾತಿಯ 45 ಹಣ್ಣಿನ ಗಿಡಗಳನ್ನು ಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿದ್ಯಾರ್ಥಿನಿಯರ ಪೈಕಿ ಹಾರಾಡಿಯ ನೇಹಾ ಎಂಬ ವಿದ್ಯಾರ್ಥಿನಿ ಮೂರು ತಿಂಗಳ ಹಿಂದೆ ಸಹಾಯಕ ಕಮೀಷನರ್‍ ರವರ ಮನೆಗೆ ಬಂದು, ನಮ್ಮ ಮನೆಯಲ್ಲಿ ಗಿಡ ನೆಟ್ಟು ಪರಿಸರ ದಿನ ಆಚರಿಸಬೇಕೆಂದು ವಿನಂತಿಸಿದರು.

ಜಾಹೀರಾತು
ಜಾಹೀರಾತು

ಅದರಂತೆ ಜೂನ್ 5 ರಂದು ವಿಶ್ವ ಪರಿಸರ ದಿನದಂದೇ ಸಹಾಯಕ ಕಮೀಷನರ್ ದಂಪತಿಯ ವಿವಾಹ ವಾರ್ಷಿಕೋತ್ಸವವೂ ಇದ್ದುದರಿಂದ ನಿನ್ನೆ ನೇಹಾಳ ಮನೆಗೆ ಬಂದು, ಗಿಡ ನೆಟ್ಟು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.