Thursday, April 30, 2026
ಸುದ್ದಿ

ನಾನು ಬಿಜೆಪಿ ಸೇರ್ಪಡೆಯಾಗುವ ಪ್ರಮೇಯವೇ ಇಲ್ಲ: ಜಿ.ಟಿ.ದೇವೇಗೌಡ – ಕಹಳೆ ನ್ಯೂಸ್

ಮೈಸೂರು: ನಾನು ಬಿಜೆಪಿ ಸೇರ್ಪಡೆಯಾಗುವ ಪ್ರಮೇಯವೇ ಇಲ್ಲ. ಈ ಬಗ್ಗೆ ಯಾರೊಬ್ಬರೊಂದಿಗೂ ಚರ್ಚೆ ನಡೆಸಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಜೆಡಿಎಸ್‌ ತೊರೆಯುವುದಿಲ್ಲ. ಮುಂದಿನ 5 ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಬಿಜೆಪಿಯಲ್ಲಿ 5 ವರ್ಷ ಇದ್ದು ಬಂದವನು. ಅಲ್ಲಿಯ ನಾಯಕರು ಹೇಗೆ , ಏನು ಎನ್ನುವುದು ತಿಳಿದಿದೆ. 1974 ರ ರೆಡ್ಡಿ ಕಾಂಗ್ರೆಸ್‌ ನಿಂದ ಹಿಡಿದು ಎಲ್ಲಾ ಪಕ್ಷಗಳಲ್ಲಿ ನನಗೆ ಸ್ನೇಹಿತರಿದ್ದಾರೆ ಎಂದರು.

ಜಿ.ಟಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದರು. ಆ ಬೆನ್ನಲ್ಲೇ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ವ್ಯಾಪಕ ಚರ್ಚೆ ಯಾಗಿತ್ತು.