Saturday, March 14, 2026
ಸುದ್ದಿ

ಏಪ್ರಿಲ್​​​ 01 ರಿಂದ ವಿದ್ಯುತ್​​​ ದರ ಗರಿಷ್ಠ 33 ಪೈಸೆ ಹೆಚ್ಚಳ: ರಾಜ್ಯದ ಜನತೆಗೆ ಶಾಕ್ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​ಸಿ) 2019-20ನೇ ಸಾಲಿನ ನೂತನ ವಿದ್ಯುತ್​​​ ದರ ಪ್ರಕಟಿಸಿದ್ದು ಗರಿಷ್ಠ 33 ಪೈಸೆ ಹೆಚ್ಚಳ ಮಾಡಿದ್ದು, ರಾಜ್ಯದ ಜನತೆಗೆ ಶಾಕ್​​ ನೀಡಿದೆ.

ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಇಆರ್ ಸಿ ಅಧ್ಯಕ್ಷ ಶಂಭು ದಯಾಳ್ ಮೀನಾ ಅವರು ನೂತನ ವಿದ್ಯುತ್​​​​ ದರ ಘೋಷಣೆ ಮಾಡಿದರು. ಏಪ್ರಿಲ್​​​ 01 ರಿಂದ ಪೂರ್ವಾನ್ವಯವಾಗುವಂತೆ ರಾಜ್ಯದೆಲ್ಲೆಡೆ ಹೊಸ ವಿದ್ಯುತ್​​​​ ದರ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದ ವಿವಿಧ ಘಟಕಗಳಾದ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂಗಳಲ್ಲಿ ದರ ಹೆಚ್ಚಳವಾಗಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ವರ್ಷ ಮಾರ್ಚ್​-ಏಪ್ರಿಲ್​ನಲ್ಲಿ ವಿದ್ಯುತ್​​ ದರ ಪರಿಷ್ಕರಣೆಯಾಗುತಿತ್ತು. ಆದರೆ, ಈ ಬಾರಿ ಲೋಕ ಸಭೆ ಚುನಾವಣೆಯಿಂದ ಒಂದು ತಿಂಗಳು ತಡವಾಗಿ ಪರಿಷ್ಕರಣೆಯಾಗಿದೆ.

ಜಾಹೀರಾತು
ಜಾಹೀರಾತು

ಏರಿಕೆಯಾದ ದರ ಪಟ್ಟಿ ಈ ಕೆಳಕಂಡತಿದೆ
ಬೆಸ್ಕಾಂ: ಯೂನಿಟ್​ಗೆ 33 ಪೈಸೆ
ಮೆಸ್ಕಾಂ : ಯೂನಿಟ್​​ಗೆ 15-30 ಪೈಸೆ
ಸೆಸ್ಕಾಂ: ಯೂನಿಟ್​ಗೆ 33 ಪೈಸೆ
ಹೆಸ್ಕಾಂ: ಯೂನಿಟ್​ಗೆ 33 ಪೈಸೆ
ಜೆಸ್ಕಾಂ: ಯೂನಿಟ್​ಗೆ 33 ಪೈಸೆ