Saturday, March 14, 2026
ಸುದ್ದಿ

ಮಗುವಿಗೆ ಮೋದಿ ಹೆಸರಿಟ್ಟು, ಇದೀಗ ಹೆಸರು ಬದಲಾಯಿಸಿದ ಮುಸ್ಲಿಂ ಕುಟುಂಬ – ಕಹಳೆ ನ್ಯೂಸ್

ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಗಳಿಸಿದ ನರೇಂದ್ರ ಮೋದಿ ಅಭಿಮಾನಿ ಕುಟುಂಬವೊಂದು ತಮ್ಮ ಮನೆಯಲ್ಲಿ ಜನಿಸಿದ ಮಗುವಿಗೆ ಮೋದಿ ಹೆಸರನ್ನ ಇಟ್ಟಿದ್ದರು, ಆದ್ರೆ ಇದೀಗ ಈ ಕುಟುಂಬ ಮಗುವಿನ ಹೆಸರನ್ನ ಬದಲಾಯಿಸಿದೆ.
ಹೌದು, ಉತ್ತರ ಪ್ರದೇಶದ ಗೊಂಡಾದಲ್ಲಿ ಮುಸ್ಲಿಂ ಕುಟುಂಬವೊಂದು ಲೋಕಸಭಾ ರಿಸಲ್ಟ್ ನ ದಿನದಂದೇ ಜನಿಸಿದ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟಿತ್ತು. ಆದ್ರೆ ಇದೀಗ ಮೊಹಮ್ಮದ್ ಅಲ್ತಾಫ್ ಆಲಮ್ ಮೋದಿ ಎಂದು ಹೆಸರು ಬದಲಾಯಿಸಿದ್ದಾರೆ.

ಹೆಸರು ಬದಲಾವಣೆಗೆ ಮಗುವಿನ ತಾಯಿ ಕಾರಣವನ್ನು ಕೊಟ್ಟಿದ್ದಾರೆ. ಮೋದಿ ಎಂದು ಹೆಸರಿಟ್ಟಿದ್ದರಿಂದ ಸಂಬಂಧಿಕರು ಹುಟ್ಟಿದ ಸಂಭ್ರಮಾಚಾರಣೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಹೀಗಾಗಿ ಈ ಹೆಸರಿನ ಮೂಲಕ ಕುಟುಂಬದವರೊಂದಿಗೆ ವಿವಾದವನ್ನು ಹುಟ್ಟುಹಾಕಲು ಇಷ್ಟವಿಲ್ಲ ಹೀಗಾಗಿ ಹೆಸರನ್ನು ಬದಲಾಯಿಸಿ ಹೆಸರಿನ ಕೊನೆಗೆ ಮೋದಿ ಎಂದು ಇಟ್ಟಿದ್ದೇವೆ ಎಂದಿದ್ದಾರೆ. ಇನ್ನು ಮಗು ಮೇ 23ರಂದು ಜನಿಸಿಲ್ಲ ಬದಲಾಗಿ ಮೇ 12ರಂದು ಜನಿಸಿದ್ದು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು