
ಉಪ್ಪಿನಂಗಡಿ : ಮೋದಿ ಪ್ರಮಾಣವಚನ ಪ್ರಯುಕ್ತ ಇಂದು ಉಪ್ಪಿನಂಗಡಿಯಲ್ಲಿ 15 ಅಟೋ ರಿಕ್ಷಾ ಚಾಲಕರಿಂದ 5 ಕಿಲೋ ಮೀಟರ್ ವರೆಗೂ ಉಚಿತ ಸೇವೆಯನ್ನ ನೀಡಲಾಗುತ್ತಿದೆ. ಉಪ್ಪಿನಂಗಡಿ ಆಟೋ ಚಾಲಕರ ವಿನೂತನ ಸೇವೆಯ ಪ್ರಯೋಜನವನ್ನ ಜನಸಾಮಾನ್ಯರು ಪಡೆದುಕೊಳ್ಳಬಹುದಾಗಿದೆ. ದೇಶದ ಭವ್ಯ ಭವಿಷ್ಯದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಿದೆ ಎಂಬುವುದಕ್ಕೆ ಸಾಕ್ಷಿಯೇ ಈ ರೀತಿಯ ಉಚಿತ ಸೇವೆ. ಇನ್ನು ಆಟೋ ಚಾಲಕರ ಈ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.





















