Saturday, March 14, 2026
ರಾಜಕೀಯಸುದ್ದಿ

ಹೈಕೋರ್ಟ್ ಅಂಗಳಕ್ಕೆ ಬಂದ ಪ್ರಜ್ವಲ್ ರೇವಣ್ಣ ಆಸ್ತಿ ಮುಚ್ಚಿಟ್ಟ ಆರೋಪ ಪ್ರಕರಣ..! – ಕಹಳೆ ನ್ಯೂಸ್

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಜ್ವಲ್​ ರೇವಣ್ಣ ಗೆದ್ದಾಗಿದೆ. ಆದ್ರೆ ಅವರ ಎಂಪಿ ಸ್ಥಾನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತ ದೇವರಾಜ ಗೌಡ ಸಲ್ಲಿಸಿದ್ದ ಎಲೆಕ್ಷನ್​​ ಪಿಟಿಷನ್​​​​ ಅರ್ಜಿ ಈಗ ಹೈಕೋರ್ಟ್​ ಅಂಗಳಕ್ಕೆ ಬಂದಿದೆ.

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ದಾಖಲೆ ಸಲ್ಲಿಕೆ ಮಾಡಿದ ಅರೋಪದ ಮೇಲೆ ದೇವರಾಜ ಗೌಡ ಕಳೆದ ವಾರವೇ ಇಪಿ ಫೈಲ್ ಮಾಡಿದ್ದಾರೆ. ಪ್ರಜ್ವಲ್​​ ತನ್ನ ಅನೇಕ ಅಕ್ರಮ ಆಸ್ತಿಗಳ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.  ರೆಪ್ರೆಸೆಂಟೇಷನ್ ಆಫ್ ಪೀಪಲ್​ ಆ್ಯಕ್ಟ್​ ಮತ್ತು ಆ್ಯಂಟಿ ಕರಪ್ಷನ್ ಆಕ್ಟ್ ಉಲ್ಲಂಘನೆ ಮಾಡಿರೋ ಆರೋಪದ ಮೇಲೆ ದೂರು ನೀಡಿದ್ದಾರೆ. ಹೈ ಕೋರ್ಟ್ ವಿಶೇಷ ಪೀಠದಲ್ಲಿ ಈ ಕೇಸ್ ವಿಚಾರಣೆಗೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದೇವರಾಜ ಗೌಡ ಅರ್ಜಿಯ ಜೊತೆ, ಪ್ರಜ್ವಲ್​​​​ ಭ್ರಷ್ಟಚಾರ ಮಾಡಿ ಹಣ ಸಂಪಾದನೆ ಮಾಡಿದ್ದಾರೆ ಎನ್ನಲಾದ ದಾಖಲೆಗಳನ್ನ ಕೋರ್ಟ್​ಗೆ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದ ವಿಚಾರಣೆಗೆ ಕೋರ್ಟ್ ಇನ್ನೂ  ದಿನಾಂಕವನ್ನು ನಿಗದಿ ಮಾಡಿಲ್ಲ.

ಜಾಹೀರಾತು
ಜಾಹೀರಾತು

ಪ್ರಜ್ವಲ್​ ರೇವಣ್ಣ ತಮ್ಮ ಚುನಾವಣಾ ಅಫಿಡವಿಟ್​​ನಲ್ಲಿ ಸುಮಾರು 12ಕ್ಕೂ ಹೆಚ್ಚು ಸುಳ್ಳು ಮಾಹಿತಿ ನೀಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ದೇವರಾಜ ಗೌಡ ಮುಖ್ಯ ಚುನಾವಣಾ ಆಯೋಗಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದರು.  ಈ ಬಗ್ಗೆ ಪರಿಶೀಲನೆ ಮಾಡಿದ್ದ ಚುನಾವಣಾ ಆಯೋಗ, ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದ ಅನರ್ಹತೆ ಬಗ್ಗೆ  ಹೈಕೋರ್ಟ್​​ನಲ್ಲಿ ಪ್ರಶ್ನಿಸಿಲು ಸೂಚಿಸಿತ್ತು, ಅದರಂತೆ ಆದಾಯ ತೆರಿಗೆ ಇಲಾಖೆ ಮತ್ತು ಲೋಕಾಯುಕ್ತದಲ್ಲಿ ದಾಖಲೆಗಳನ್ನು ಕೇಳಿತ್ತು.