Saturday, March 14, 2026
ಸುದ್ದಿ

ಈ ಚುನಾವಣೆಯಲ್ಲಿ ಕೆಮಿಸ್ಟ್ರಿ ಗಣಿತವನ್ನ ಸೋಲಿಸಿತು: ಮೋದಿ – ಕಹಳೆ ನ್ಯೂಸ್

ವಾರಣಾಸಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ತವರು ಕ್ಷೇತ್ರದ ಮತದಾರರಿಗೆ ಧನ್ಯವಾದ ಸಲ್ಲಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಗೆ ಭೇಟಿ ನೀಡಿದ್ರು.  ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ನಾನು ಬಿಜೆಪಿ ಕಾರ್ಯಕರ್ತನಾಗಿ ಪಾರ್ಟಿ ಹಾಗೂ ಕಾರ್ಯಕರ್ತರು ಏನು ಆದೇಶ ಮಾಡ್ತಾರೆ ಅದನ್ನ ಪಾಲಿಸಲು ಕೈಲಾದ ಮಟ್ಟಿಗೆ ಪ್ರಯತ್ನಿಸುತ್ತೇನೆ. ಕಾರ್ಯಕರ್ತರ ಸಂತೋಷವೇ ನಮ್ಮ ಜೀವನ ಮಂತ್ರ. ನಾನು ದೇಶದ ಪ್ರಧಾನಿಯಾಗಿರಬಹುದು ಆದ್ರೆ ಕಾಶಿಗೆ ನಾನು ಕಾರ್ಯಕರ್ತನೇ ಎಂದರು. ಇದೇ ವೇಳೆ ಕೆಲವು ಕಾರ್ಯಕರ್ತರು ತಂದಿದ್ದ ಮನವಿ ಪತ್ರವನ್ನು ಸಂಗ್ರಹಿಸಿ ತಮಗೆ ನೀಡಲು ಕೂಡ ಸೂಚಿಸಿದ್ರು.

ಇನ್ನು ಚುನಾವಣೆಗೆ ಮುನ್ನ ವಾರಣಾಸಿಯ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದೆ. ಒಂದು ತಿಂಗಳವರೆಗೆ ನೀವು ಕಾಶಿ ಪ್ರವೇಶಿಸುವಂತಿಲ್ಲ ಎಂದಿದ್ರು. ಮೇ 19ರಂದು ಮತದಾನದ ದಿನ ಕಾಶಿಗೆ ಹೋಗೋಣ ಎಂದುಕೊಂಡೆ. ಆದ್ರೆ ಅವರು ಹೇಳಿದ್ದ ಮಾತು ನೆನಪಾಯ್ತು. ಈ ಬಾಬಾ ಇಲ್ಲದಿದ್ರೆ ಇನ್ನೊಂದು ಬಾಬಾ ಎಂದುಕೊಂಡು ಕೇದಾರಕ್ಕೆ ಹೋದೆ. ಮತದಾನ ಹಾಗೂ ಫಲಿತಾಂಶದ ದಿನ ತುಂಬಾ ನಿಶ್ಚಿಂತನಾಗಿದ್ದ ಅಭ್ಯರ್ಥಿ ನಾನು. ಅದಕ್ಕೆ ಕಾರಣ ನಿಮ್ಮ ಪರಿಶ್ರಮ. ಹೀಗಾಗಿ ಆರಾಮಾಗಿ ಕೇದಾರನಾಥಕ್ಕೆ ಹೋಗಿ ಬಾಬಾನ ಪಾದಗಳಲ್ಲಿ ಕುಳಿತಿದ್ದೆ ಅಂತ ಮೋದಿ ಹೇಳಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಸ್ಪರ್ಧಿಸಿದ್ದ ಇತರೆ ಅಭ್ಯರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ದೇಶ ವಿದೇಶದ ಮಾಧ್ಯಮಗಳು ಕಾಶಿ ಬಗ್ಗೆ ವರದಿ ಮಾಡಲು ಬಂದಿದ್ವು, ಅವರಿಗೂ ಧನ್ಯವಾದ ಹೇಳ್ತೀನಿ. ಇಲ್ಲಿನ ಕಾರ್ಯಕರ್ತರನ್ನು ಭೇಟಿಯಾದಾಗ ಹೇಳಿದ್ದೆ, ಪ್ರತಿ ಮನೆಗೆ ಪ್ರತಿ ಗಲ್ಲಿಗೆ ನರೇಂದ್ರ ಮೋದಿ ಹೋರಾಡ್ತಾನೆ ಅಂತ. ನೀವೆಲ್ಲರೂ ನರೇಂದ್ರ ಮೋದಿಯಾಗಿ ಚುನಾವಣಾ ಅಭಿಯಾನ ನಡೆಸಿದ್ರಿ. ಕಾಶಿಯ ಕಾರ್ಯಕರ್ತರು ಈ ಚುನಾವಣೆಯನ್ನು ಗೆಲುವು ಸೋಲಿನ ಆಧಾರದ ಮೇಲೆ ತೂಕ ಮಾಡಲಿಲ್ಲ. ಇದನ್ನ ಪ್ರಜಾಪ್ರಭುತ್ವದ ಹಬ್ಬ ಎಂಬಂತೆ ಮಾಡಿದ್ರಿ ಎಂದು ಹೇಳಿದ್ರು.

ಜಾಹೀರಾತು
ಜಾಹೀರಾತು

ಕಾಶಿ ಮಾತ್ರವಲ್ಲ, ಇಡೀ ಉತ್ತರಪ್ರದೇಶಕ್ಕೆ ಅಭಿನಂದನೆ ಹೇಳಬೇಕು. ಉತ್ತರಪ್ರದೇಶದಲ್ಲಿ ನಡೆದ 3 ಚುನಾವಣೆ ಬಳಿಕವೂ ರಾಜಕೀಯ ಪಂಡಿತರ ಕಣ್ಣು ತೆರೆದಿಲ್ಲ. ಗಣಿತಕ್ಕೂ ಮಿಗಿಲಾಗಿ ಕೆಮಿಸ್ಟ್ರಿ ಇರುತ್ತೆ ಅನ್ನೋದನ್ನ ಅವರು ತಿಳಿದುಕೊಳ್ಳಬೇಕು. ಗುಣಾಕಾರ ಭಾಗಾಕಾರವನ್ನೂ ಮೀರಿದ ಕೆಮಿಸ್ಟ್ರಿ ಇರುತ್ತೆ. ಈ ಬಾರಿ ಕೆಮಿಸ್ಟ್ರಿ ಗಣಿತವನ್ನ ಸೋಲಿಸಿದೆ. ಒಂದು ಗ್ರಹಿಕೆ ನಿರ್ಮಿಸಲು ಅವರು ಪ್ರಯತ್ನಿಸಿದ್ರು. ಆದ್ರೆ ತಪ್ಪು ಗ್ರಹಿಕೆಗೆ ಸೋಲಾಗಿದೆ. ರಾಜಕಾರಣ ಗ್ರಹಿಕೆಗೆ ಮೀರಿದ್ದು ಎಂದು ಹೇಳಿದ್ರು.

ಕೆಲಸ ಹಾಗೂ ಕೆಲಸಗಾರ ಅದ್ಭುತಗಳನ್ನ ಸೃಷ್ಟಿಮಾಡಬಹುದು. ಕಾಶ್ಮೀರ, ಬಂಗಾಳ ಹಾಗೂ ಕೇರಳದಲ್ಲಿ  ಹಿಂಸಾಚಾರ ನಡೆಯಿತು. ಬಿಜೆಪಿ ಹೆಸರು ಹೇಳುತ್ತಿದ್ದಂತೆ ವಿಭಜನೆಯ ಮಾತು ಕೇಳಿಬರುತ್ತೆ. ಆದ್ರೆ  ನಾವು ಏಕತೆಯ ಮಂತ್ರ ಇಟ್ಟುಕೊಂಡು ಸಾಗ್ತೀವಿ, ಮನಸ್ಸುಗಳಲ್ಲಿ ಕಿಚ್ಚು ಬೆಳೆಯಲು ಬಿಡುವುದಿಲ್ಲ.  ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​ ಎನ್ನುವುದರಲ್ಲಿ ನಮ್ಮ ನಂಬಿಕೆ ಇದೆ. ಬಿಜೆಪಿ ವೋಟ್​ಬ್ಯಾಂಕ್​ ಪಾಲಿಟಿಕ್ಸ್​ ನಡೆಸಲಿಲ್ಲ. ನಮಗೆ ಭಾರತ ಮೊದಲು, ವೋಟ್​ಬ್ಯಾಂಕ್ ಅಲ್ಲ ಎಂದು ಹೇಳಿದ್ರು.

ಕೇರಳ, ಕಾಶ್ಮೀರ ಹಾಗೂ ತಮಿಳುನಾಡಿನಲ್ಲಿ ಗೆದ್ದರೂ ಈ ರಾಜಕೀಯ ಪಂಡಿತರು ಹಿಂದಿ ಹಾರ್ಟ್​ಲ್ಯಾಂಡ್​ ಪಕ್ಷ ಅಂತಾರೆ. ಆದ್ರೆ ಬಿಜೆಪಿ ಅದನ್ನು ಮೀರಿದ್ದು ಅಂತ ಮೋದಿ ಹೇಳಿದ್ರು. ಕಾಶಿಯ ಪ್ರತಿ ಮತದಾರರಿಗೂ ಧನ್ಯವಾದ, ಇಡೀ ಉತ್ತರಪ್ರದೇಶಕ್ಕೆ ಧನ್ಯವಾದ ಎಂದು ಹೇಳಿ ಮಾತು ಮುಗಿಸಿದ್ರು.