
ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಈಗ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಒಂದರ ಹಿಂದೊಂದರಂತೆ ಸಿನೆಮಗಳು ಬರ್ತಾನೇ ಇದ್ದು ಫುಲ್ ಬ್ಯುಸಿಯಾಗಿರುವ ರಶ್ಮಿಕಾ ದಿಢೀರನೆ ಸಂಭಾವನೆ ದುಪ್ಪಟ್ಟು ಮಾಡಿಕೊಂಡಿದ್ದಾರಂತೆ.

ಕೆಲವೇ ವರ್ಷದಲ್ಲಿ ಮೂರು ನಾಲ್ಕು ಸಿನೆಮಾಗಳಲ್ಲಿ ನಟಿಸಿ, ಟಾಪ್ ಹೀರೊಗಳೊಂದಿಗೆ ತೆರೆ ಹಂಚಿಕೊಂಡಿರುವ ಕಿರಿಕ್ ಸುಂದರಿಗೆ ಬೇಡಿಕೆ ಹೇಗಿದೆ. ಬೇಡಿಕೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ದಕ್ಷಿಣ ಭಾರತದ ಸ್ಟಾರ್ ನಟರ ಚಿತ್ರಗಳಿಗೆ ಮೊದಲು ಬರೋ ನಟಿಯ ಹೆಸರು ಅಂದ್ರೆ ಅದು ರಶ್ಮಿಕಾ ಮಂದಣ್ಣ.
ಇದೀಗ ಸದ್ಯ ರಶ್ಮಿಕಾ ತಮ್ಮ ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಾರೆ. ಈ ಮೊದಲು ಒಂದು ಸಿನಿಮಾಗೆ 40 ಲಕ್ಷ ಪಡೆಯುತ್ತಿದ್ದ ರಶ್ಮಿಕಾ ಈಗ 80 ಲಕ್ಷಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಸ್ಟಾರ್ ನಾಯಕರ ಸಿನಿಮಾಗಳು. ರಶ್ಮಿಕಾ ಕೈಯಲ್ಲಿ ಇರುವ ಪ್ರಾಜೆಕ್ಟ್ ಗಳು ಬಿಗ್ ಬಜೆಟ್‍ನ ಬಿಗ್ ಸ್ಟಾರ್ ಸಿನಿಮಾಗಳೆ ಆಗಿವೆ.
ಟಾಲಿವುಡ್‍ನ ಸ್ಟಾರ್ ನಟರಾದ ಅಲ್ಲು ಅರ್ಜುನ್, ನಿತಿನ್ ಸಿನಿಮಾಗಳಿಗೆ ರಶ್ಮಿಕಾನೆ ನಾಯಕಿ. ಅಲ್ಲದೆ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೂ ರಶ್ಮಿಕಾ ನಾಯಕಿ ಅಂತ ಹೇಳಲಾಗುತ್ತಿದೆ. ಹಾಗಾಗಿ ಬೇಡಿಕೆ ಹೆಚ್ಚಾಗುತ್ತಿದಂತೆ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ರಶ್ಮಿಕಾ. ‘ಗೀತಾ ಗೋವಿಂದಂ’ ಮತ್ತು ‘ಯಜಮಾನ’ ಚಿತ್ರದ ಸಕ್ಸಸ್ ಅಲ್ಲದೆ ರಿಲೀಸ್‍ಗೂ ಮೊದಲ ‘ಡಿಯರ್ ಕಾಮ್ರೇಡ್’ ಕ್ರಿಯೆಟ್ ಮಾಡಿರುವ ಹೈಪ್ ರಶ್ಮಿಕಾ ಸಂಭಾವನೆ ಹೆಚ್ಚಿಸಿಕೊಳ್ಳಲು ಮುಖ್ಯವಾದ ಕಾರಣವಾಗಿದೆ. ಸದ್ಯ 80ಲಕ್ಷದಲ್ಲಿ ಇರುವ ಸಂಭಾವನೆ ಮುಂದಿನ ದಿನಗಳಲ್ಲಿ ಕೋಟಿಗೆ ತಲುಪಿದ್ರು ಅಚ್ಚರಿ ಇಲ್ಲ.














