Saturday, March 14, 2026
ಸುದ್ದಿ

ಹಲವು ಜಯಂತಿಗಳಂದು ನೀಡುವ ಸರಕಾರಿ ರಜೆ ರದ್ದು? – ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿ ಎಚ್‍ಡಿಕೆ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು ಮಹತ್ವದ ಅನೇಕ ವಿಚಾರಗಳ ಬಗ್ಗೆ ತಿರ್ಮಾನ ಕೈಗೊಳ್ಳುವ ಸಾದ್ಯತೆ ಇದೆ. ಅಂತೆಯೇ ರಾಜ್ಯ ಸರಕಾರವು ಹಲವು ಜಯಂತಿಗಳಂದು ನೀಡುವ ರಜೆಗಳನ್ನು ರದ್ದು ಮಾಡುವ ಕುರಿತಂತೆ ಇಂದು ನಡೆಯುವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, 2ನೇ ಶನಿವಾರದಂತೆ ನಾಲ್ಕನೇ ಶನಿವಾರದಂದು ರಜೆ ನೀಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೆಚ್ಚುವರಿ ಕಾರ್ಯಸೂಚಿಯಲ್ಲಿ ಸಂಪುಟದ ಮುಂದೆ ಮಂಡನೆಯಾಗಲಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು

ಆರನೇ ವೇತನ ಆಯೋಗದ ಶಿಫಾರಸಿನಂತೆ ಜಯಂತಿಗಳನ್ನು ರದ್ದು ಮಾಡುವ ಬಗ್ಗೆ ಪರಿಶೀಲನೆಗೆ ಉಪ ಸಮಿತಿ ರಚನೆಯಾಗಿತ್ತು. ಸರ್ಕಾರಿ ನೌಕರರ ಸಿಎಲ್‍ಗಳಲ್ಲಿ ಮೂರನ್ನು ರದ್ದು ಮಾಡುವುದು, ರಾಜ್ಯ ಸರ್ಕಾರ ನೀಡುವ ವಿವಿಧ ಎಂಟು ಜಯಂತಿಗಳ ರಜೆಯನ್ನು ತೆಗೆದು ಹಾಕುವುದು, ಎರಡನೇ ಶನಿವಾರದ ರೀತಿಯಲ್ಲಿ ನಾಲ್ಕನೇ ಶನಿವಾರವೂ ರಜೆ ನೀಡುವ ಕುರಿತು ವರದಿಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.”