ಮಂಗಳೂರಿನಲ್ಲಿ ವೇಶ್ಯಾವಾಟಿಕೆ ದಂದೆ ಮೇಲೆ ಪೋಲಿಸ್ ದಾಳಿ ; ಜುನೈಸ್, ಅಬ್ದುಲ್ ನಜೀರ್, ನಿಯಾಜ್ ಬಂಧನ – ಕಹಳೆ ನ್ಯೂಸ್

ಮಂಗಳೂರು : ಹೊರರಾಜ್ಯದ ಮಹಿಳೆಯರನ್ನು ಬಳಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಕೋಯಿಕ್ಕೋಡ್‍ನ ತಳೇರಿಯ ಜುನೈಸ್, ಸುರತ್ಕಲ್‍ನ ಅಬ್ದುಲ್ ನಜೀರ್ ಹಾಗೂ ಎಡಪದವಿನ ನಿಯಾಜ್ ಬಂಧಿತ ಆರೋಪಿಗಳು. ಈ ಸಂದರ್ಭದಲ್ಲಿ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.
ಶಕ್ತಿನಗರದ ಕ್ರಾಸ್ ಸೌಹರ್ದಲೇನ್ ಬಳಿ ಅಲ್ ಶಮಾಸ್ ಎಂಬ ಹೆಸರಿನ ಬಾಡಿಗೆ ಮನೆಯಲ್ಲಿ ಹೊರರಾಜ್ಯದ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಎಕಾನಾಮಿಕ್ ನಾರ್ಕೋಟಿಕ್ ಕ್ರೈ ಇನ್ ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ ಅವರಿಗೆ ಬಂದ ಖಚಿತ ಮಾಹಿತಿಯಂತೆ ಶನಿವಾರ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ ಲಕ್ಷ್ಮೀ ಗಣೇಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.














