
ಬೆಳ್ತಂಗಡಿ : ಬ್ಯುಸಿನೆಸ್ ವಿಚಾರಕ್ಕೆ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕು ಗುರುವಾಯನ ಕರೆಯ ಪಣೆಜಾಲು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಶಶಿಧರ್ ಎಂದು ಗುರುತಿಸಲಾಗಿದೆ. ಶಶಿಧರ್ ತಮ್ಮದೆ ಸ್ವಂತ ಫರ್ನಿಚರ್ ಉದ್ಯಮ ಮಾಡಿಕೊಂಡಿದ್ದು, ಬ್ಯುಸಿನೆಸ್ ಕೈ ಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಊರಿನ ಜನತೆ ಆಗಮಿಸಿ ಶವವನ್ನ ಮೇಲಕ್ಕೆತ್ತು ಕಾರ್ಯವು ನಡೆದಿದೆ.



















