
ಟಾಲಿವುಡ್‍ನ ಬೆಸ್ಟ್ ಜೋಡಿಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಕೂಡ ಒಂದು. ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಕಮಾಲ್ ಮಾಡಿದ್ದ ಜೋಡಿ ಇದೀಗ ‘ಡಿಯರ್ ಕಾಮ್ರೇಡ್’ನಲ್ಲಿ ಮತ್ತೆ ಒಂದಾಗಿದೆ. ಭರತ್ ಕಾಮಾ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದ್ದು, ಈಗಾಗಲೇ ಟೀಸರ್ ಹಾಗೂ ಕೆಲ ಹಾಡುಗಳಿಂದ ನೋಡುಗರ ಗಮನ ಸೆಳೆದಿದೆ. ಇದೀಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದೆ. ‘ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು’ ಅನ್ನೋ ಲಿರಿಕ್ಸ್ ನಿಂದ ಶುರುವಾಗೋ ಹಾಡು ಇದಾಗಿದ್ದು, ಹಾಡಿಗೆ ಧನಂಜಯ್ ರಂಜನ್ ಲಿರಿಕ್ಸ್ ಬರೆದಿದ್ದಾರೆ. ಸಿದ್ ಶ್ರೀರಾಮ್ ಹಾಗೂ ಐಶ್ವರ್ಯ ರವಿಚಂದ್ರನ್ ಕಂಠದಲ್ಲಿ ಈ ಹಾಡು ಅಮೋಘವಾಗಿ ಮೂಡಿಬಂದಿದೆ. ಇದೊಂದು ಲವ್ ಕಂ ರೊಮ್ಯಾಂಟಿಕ್ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ. ಚಿತ್ರದಲ್ಲಿ ಬಾಬಿ ರೋಲ್‍ನಲ್ಲಿ ವಿಜಯ್ ಕಾಣಿಸಿಕೊಂಡ್ರೆ, ಲಿಲ್ಲಿ ಪಾತ್ರದಲ್ಲಿ ರಶ್ಮಿಕಾ ಮಿಂಚಲಿದ್ದಾರೆ. ಈಗಾಗಲೇ ಟೀಸರ್‍ನಲ್ಲಿ ಜೋಡಿ ಲಿಪ್ ಲಾಕ್ ಮೂಲಕ ಹಾರ್ಟ್ ಬೀಟ್ ಹೆಚ್ಚಿಸಿದ್ದು ಚಿತ್ರ ಇದೇ ಜುಲೈ 26 ವಲ್ರ್ಡ್ ವೈಡ್ ತೆರೆಕಾಣಲಿದೆ.














