Thursday, March 12, 2026
ಸುದ್ದಿ

‘ಯೂ ಆರ್ ಮೈ ಪೊಲೀಸ್ ಬೇಬಿ’ ಅಂತಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ – ಕಹಳೆ ನ್ಯೂಸ್

ಸೆಂಚುರಿ ಸ್ಟಾರ್ ಶಿವಣ್ಣ, ಡ್ಯಾನ್ಸಿಂಗ್‍ನಲ್ಲಿ ಕಿಂಗ್ ಅನ್ನೋದು ನಮಗೆಲ್ಲಾ ಗೊತ್ತಿದೆ. ವಯಸ್ಸು 50 ದಾಟಿದ್ರೂ ಯುವಕರೂ ನಾಚುವಂತೆ ಸ್ಟೆಪ್ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡ್ತಾರೆ. ಸದ್ಯ ರವಿವರ್ಮ ನಿರ್ದೇಶನದಲ್ಲಿ ಬರ್ತಿರೋ ‘ರುಸ್ತುಂ’ ಚಿತ್ರದ ‘ಯೂ ಆರ್ ಮೈ ಪೊಲೀಸ್ ಬೇಬಿ’ ಅನ್ನೋ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡಿನಲ್ಲಿ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಜೊತೆಯಾಗಿ ಶಿವಣ್ಣ ತಕಥೈ ಅಂತಾ ಕುಣಿದಿದ್ದಾರೆ. ಕಣ್ಣಲ್ಲಿ ಕನ್ನಡಕ, ರಂಗು ರಂಗಿನ ಡ್ರೆಸ್, ಅದ್ಧೂರಿ ಸೆಟ್‍ನಲ್ಲಿ ಶಿವಣ್ಣ ಹಾಗೂ ಶ್ರದ್ಧಾ ಮಿಂಚಿದ್ದಾರೆ.

ಇನ್ನು ಈ ಹಾಡಿಗೆ ಎ.ಪಿ ಅರ್ಜುನ್ ಲಿರಿಕ್ಸ್ ಬರೆದಿದ್ದು ರಘು ದೀಕ್ಷಿತ್ ಹಾಗೂ ಅಪೂರ್ವ ಶ್ರೀಧರ್ ಕಂಠದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ. ಜೊತೆಗೆ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆಯಿದೆ. ಸದ್ಯ ಈ ಹಾಡು ಭಾರೀ ಜನಮೆಚ್ಚುಗೆ ಗಳಿಸಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸೋ ಮೂಲಕ ಟ್ರೆಂಡಿಂಗ್‍ನಲ್ಲಿ ಟಾಪ್ 15ನೇ ಸ್ಥಾನದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು