
ಕೊಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನ ಟ್ರೋಲ್ ಮಾಡುವ ಫೋಟೋ ಹಾಕಿದ್ದಕ್ಕೆ ಬಂಧಿತರಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಇಂದು ಬಿಡುಗಡೆಯಾಗಿದ್ದಾರೆ. ನಿನ್ನೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರಿಂದ ತಕ್ಷಣವೇ ರಿಲೀಸ್ ಮಾಡಬೇಕಿತ್ತು.
ಆದರೂ ಅಧಿಕಾರಿಗಳು ತಡವಾಗಿ ರಿಲೀಸ್ ಮಾಡಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.ಬಿಡುಗಡೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಿಯಾಂಕಾ, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ, ಮೊದಲಿಗೆ ಪ್ರಿಯಾಂಕಾ ಕ್ಷಮಾಪಣಾ ಪತ್ರ ಬರೆದುಕೊಡಬೇಕು ಎಂದು ಷರತ್ತು ಹಾಕಿ ಜಾಮೀನು ನೀಡಿದ್ದ ಕೋರ್ಟ್, ನಂತರದಲ್ಲಿ ಆದೇಶ ಮಾರ್ಪಡಿಸಿ, ಕ್ಷಮೆ ಕೇಳೋದು ಬೇಡ ಎಂದಿತ್ತು.
ಆದ್ರೂ ನನ್ನಿಂದ ಬಲವಂತವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದಾರೆ. ಬಾಂಡ್‍ಗೆ ಸಹಿ ಹಾಕಿಸಿಕೊಂಡಿದ್ದಾರೆ. ನಾನು ಈ ಕೇಸಿನ ಸಂಬಂಧವಾಗಿ ಕ್ಷಮೆ ಕೇಳುವುದಿಲ್ಲ. ಬದಲಾಗಿ ಹೋರಾಡುತ್ತೇನೆ ಎಂದಿದ್ದಾರೆ.













