Tuesday, March 17, 2026
ಸುದ್ದಿ

ಹಣಕಾಸಿನ ವಿಚಾರಕ್ಕೆ ಮಹಿಳೆಯ ಬರ್ಬರ ಹತ್ಯೆ – ಕಹಳೆ ನ್ಯೂಸ್

ಮಂಗಳೂರು : ಹಣದ ವಿಚಾರಕ್ಕೆ ಸಂಬಂಧಿಸಿ ದಂಪತಿಗಳಿಬ್ಬರು ಮಹಿಳೆಯನ್ನ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶ್ರೀಮತಿ ಶೆಟ್ಟಿ ಭೀಕರವಾಗಿ ಹತ್ಯೆಗೀಡಾದ ಮಹಿಳೆ. ಶ್ರೀಮತಿ ಶೆಟ್ಟಿ ಅವರಿಂದ ಸಾಲದ ರೂಪದಲ್ಲಿ ಜಾನ್ಸನ್ ಮತ್ತು ವಿಕ್ಟೋರಿಯಾ ದಂಪತಿಗಳು ಹಣವನ್ನ ಪಡೆದಿದ್ದರು, ಹಣವನ್ನ ಹಿಂತಿರುಗಿಸುವಂತೆ ಕೇಳಲು ಆರೋಪಿ ಮನೆಗೆ ಬಂದಿದ್ದ ಶ್ರೀಮತಿ ಶೆಟ್ಟಿಯನ್ನ ದಂಪತಿಗಳಿಬ್ಬರು ಸೇರಿ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮಂಗಳೂರು ನಗರದ ಮೂರು ಕಡೆ ಎಸೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ವಿಚಾರ ತಿಳಿದು ಕಾರ್ಯಚರಣೆ ಮುಂದುವರಿಸಿದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸುವ ಸಂದರ್ಭದಲ್ಲಿ ಆರೋಪಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹೀಗಾಗಿ ಆರೋಪಿಗಳನ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ, ಇನ್ನು ಪ್ರಕರಣ ಭೇಧಿಸುವಲ್ಲಿ 30 ಪೊಲೀಸ್ ಅಧಿಕಾರಿಗಳ ಮೂರು ತಂಡ ಯಶಸ್ವಿಯಾಗಿದೆ. ಇದೀಗ ದಂಪತಿಗಳಿಬ್ಬರು ಪೋಲೀಸರ ಅತಿಥಿಗಳಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು