
ಸಾಧಕರನ್ನ ಜೀವನದ ಯಶೋಗಾಥೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟು ಜನತೆಗೆ ತೋರಿಸುವ ಕಾರ್ಯಕ್ರಮ ಅಂದ್ರೆ ಅದು ಕನ್ನಡದ ವೀಕೆಂಡ್ ವಿತ್ ರಮೇಶ್. ಆದರೆ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಭರ್ಜರಿಯಾಗಿರಲಿದೆ. ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ.
ಬರೀ ಸಿನಿಮಾ ರಂಗದವರನ್ನೇ ಕರೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಇದಕ್ಕೆಲ್ಲ ಉತ್ತರ ಎಂಬಂತೆ ಮೂರ್ತಿ ದಂಪತಿ ತಮ್ಮ ಜೀವನಾನುಭವ ಹಂಚಿಕೊಳ್ಳಲಿದ್ದಾರೆ.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್‍ಗೆ ಆಗಮಿಸುತ್ತಿರುವುದನ್ನು ಜೀ ವಾಹಿನಿ ತನ್ನ ಅಧಿಕೃತ ಪೇಜ್‍ನಲ್ಲಿ ಪ್ರಕಟ ಮಾಡಿದೆ.















