
ಇಂದು ವಿಶ್ವದಾದ್ಯಂತ ವಲ್ಡ್ ಫ್ಯಾಮಿಲಿ ಡೇಯನ್ನ ಆಚರಿಸಲಾಗ್ತಾ ಇದೆ. ಈ ಯಾಂತ್ರಿಕೃತ ಬದುಕಿನಲ್ಲಿ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ ಅಗತ್ಯವಾಗಿದೆ. ಹಾಗಾಗಿ ಮೌಲ್ಯಯುತ ಜೀವನಕ್ಕಾಗಿ ವಿಶ್ವ ಸಂಸ್ಥೆ 1995ರಲ್ಲಿ ವಿಶ್ವ ಕುಟುಂಬ ದಿನಾಚರಣೆಯನ್ನ ಜಾರಿಗೆ ತಂದಿತ್ತು. ವಸುದೈವ ಕುಟುಂಬಕಂ ಎಂಬ ಮಾತಿನಂತೆ ವಿಶ್ವವೇ ಒಂದು ಕುಟುಂಬವಾಗಿದ್ದು, ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನ ಆಚರಿಸಲಾಗುತ್ತಿದೆ. ಒಂದು ಕುಟುಂಬದಲ್ಲಿ ಸಂತೋಷ ತುಂಬಿ ತುಳುಕಬೇಕಾದರೆ ಪ್ರತಿಯೊಬ್ಬರ ಮನಸ್ಥಿತಿ ಸಮತೋಲನದಿಂದ ಕೂಡಿರಬೇಕು.
ಎಷ್ಟೆ ಅತ್ತರೂ, ನಕ್ಕರೂ ನಮ್ಮವರು, ನಮ್ಮ ಕುಟುಂಬ ಅನ್ನುವ ಭಾವನೆ ಇದ್ರೆ ಆಗ ಆದ ಇಂಚಿಂಚೂ ನೋವು ಕೂಡ ಕ್ರಮೇಣ ಕಮ್ಮಿಯಾಗುತ್ತಾ ಹೋಗುತ್ತೆ. ಅದೇ ಒಂದು ಪರಿಪೂರ್ಣ ಕುಟುಂಬಕ್ಕಿರುವ ತಾಕತ್ತು. ಹಾಗಾಗಿ ದೇಶದಲ್ಲಿರುವ ಪ್ರತಿ ಕುಟುಂಬಕ್ಕೂ ನಮ್ಮ ಕಡೆಯಿಂದ ಹ್ಯಾಪಿ ಫ್ಯಾಮಿಲಿ ಡೇ















