Thursday, March 19, 2026
ಸುದ್ದಿ

ಮಂಗಳೂರಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಚ್ಚರಿ: ಸುಬ್ರಹ್ಮಣ್ಯ ಸ್ವಾಮಿ ವಾಹನ ನವಿಲು ಪ್ರತ್ಯಕ್ಷ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮಂಗಳೂರು ನೀರುಮಾರ್ಗದಲ್ಲಿರುವ ಸುಬ್ರಹ್ಮಣ್ಯ ದೇಗುಲದಲ್ಲಿ ಪೂಜೆ ನಡೆಯುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸ್ವಾಮಿ ವಾಹನ ನವಿಲು ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ದೇವಾಲಯದಲ್ಲಿ ಧ್ವಜಸ್ತಂಭಕ್ಕೆ ತೈಲಾಧಿವಾಸ ಪೂಜೆ ನೆರವೇರಿಸಲಾಗಿದ್ದು, ಧ್ವಜಸ್ತಂಭ ಪೂಜೆಯ ವೇಳೆಯಲ್ಲಿ ನವಿಲೊಂದು ಆಗಮಿಸಿದೆ. ಭಕ್ತರೆಲ್ಲ ಇದನ್ನು ಕಂಡು ನಮಿಸಿದ್ದಾರೆ. ಗರ್ಭಗುಡಿಯಲ್ಲಿ ಪೂಜೆ ನಡೆಯುವ ಸಮಯ ಎದುರಲ್ಲೇ ನಿಂತಿದ್ದ ನವಿಲು ಬಳಿಕ ಪ್ರದಕ್ಷಿಣೆ ಹಾಕಿದೆ. ಸಾಮಾನ್ಯವಾಗಿ ನವಿಲುಗಳು ಜನಜಂಗುಳಿ ಕಂಡಾಗ ದೂರ ಸರಿಯುತ್ತವೆ. ಆದರೆ ಈ ನವಿಲು ಪೂಜೆಯ ವೇಳೆಯಲ್ಲಿ ಆಗಮಿಸಿದ್ದು, ಅಲ್ಲೇ ಇದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು