
ಓದಿಕೊಳ್ಳಲಿ ಅಂತಾ ಮಗಳನ್ನು ಕೋಣೆಯಲ್ಲಿ ಕೂಡಿಹಾಕಿ, ಪಾಲಕರು ಮದುವೆ ಸಮಾರಂಭಕ್ಕೆ ತೆರಳಿದ್ದರು. ಸಮಾರಂಭ ಮುಗಿಸಿ ಬರುವಷ್ಟರಲ್ಲಿ ಬಾಲಕಿ ಹೆಣವಾಗಿದ್ದಾಳೆ. ಫ್ಲಾಟ್ ಗೆ ಬೆಂಕಿ ಬಿದ್ದು 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಮುಂಬೈನ ದಾದರ್ ನಲ್ಲಿ ನಡೆದಿದೆ.
ಶ್ರಾವಣಿ ಚೌಹಾಣ್ ಮೃತ ಬಾಲಕಿ. ಶ್ರಾವಣಿ ತಂದೆ ಪೊಲೀಸ್ ಠಾಣೆಯೊಂದರಲ್ಲಿ ಕೆಲಸ ಮಾಡ್ತಾರೆ. ಮಧ್ಯಾಹ್ನ ಫ್ಲಾಟ್ ನಿಂದ ಹೊಗೆ ಬರ್ತಿದ್ದಂತೆ ಅಕ್ಕಪಕ್ಕದವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸಲು ಸಿಬ್ಬಂದಿಗೆ ಒಂದು ಗಂಟೆ ಬೇಕಾಗಿದೆಯಂತೆ. ಮೃತ ಬಾಲಕಿ ಮೂರನೇ ಮಹಡಿಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.
ಮನೆ ಬೀಗ ಮುರಿದು ಸಿಬ್ಬಂದಿ ಒಳನುಗ್ಗಿದ್ದರು. ಅಷ್ಟರಲ್ಲಿ ಬಾಲಕಿ ಶವವಾಗಿದ್ದಳು. ಮರಣೋತ್ತರ ಪರೀಕ್ಷೆ ನಂತ್ರ ಬಾಲಕಿ ತಂದೆ-ತಾಯಿ ವಿಚಾರಣೆ ನಡೆಯಲಿದೆ.















