Friday, March 20, 2026
ಸುದ್ದಿ

ಕರಾವಳಿ ಇದೀಗ ಸಿನಿಮಾ ನಿರ್ಮಾಣದ ಹಾಟ್ ಸ್ಫಾಟ್ – ಕಹಳೆ ನ್ಯೂಸ್

ಮಂಗಳೂರು : ಕಡಲ ನಗರಿಯಲ್ಲಿ ಇದೀಗ ಹೊಸ ಹೊಸ ಸಿನೇಮಾಗಳು ಚಿತ್ರಿಕರಣವಾಗಿತ್ತಿದ್ದು, ಸಿನಿಮಾ ನಿರ್ಮಾಣದ ಹಾಟ್ ಸ್ಫಾಟ್ ಎಂದೇ ಹೆಸರುವಾಸಿಯಾಗುತ್ತಿದೆ. ಬರೀ ತುಳು ಭಾಷೆಯ ಚಿತ್ರ ನಿರ್ಮಾಣ ಮಾತ್ರವಲ್ಲ, ಕನ್ನಡ ಭಾಷೆಯ ಸಿನಿಮಾಗಳು ಮಂಗಳೂರಲ್ಲಿ ತಯಾರಾಗುತ್ತಿದೆ. ಈ ಲೀಸ್ಟ್ ಗೆ ಇದೀಗ ‘ರೋಹಿತಾಶ್ವಿನ್’ ಎಂಬ ಹೊಸ ಕನ್ನಡ ಸಿನಿಮಾ ಸೇರ್ಪಡೆಗೊಳ್ಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹೊಸ ಸಿನಿಮಾವನ್ನು ರಂಶಾಂಕ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಿಸಲಾಗುತ್ತಿದೆ. ಮಂಗಳೂರಿನ ಇತಿಹಾಸ ಪ್ರಸಿದ್ಧ ಶರವು ಮಹಾಗಣಪತಿ ದೇವಸ್ಥಾನದಲ್ಲಿ ‘ರೋಹಿತಾಶ್ವಿನ್’ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು.
ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಖ್ಯಾತ ಚಲನಚಿತ್ರ ನಟ ರೋಹಿತ್ ಕಟೀಲ್ ಕ್ಯಾಮರಾ ಸ್ವಿಚ್ ಆನ್ ಮಾಡಿದರು. ಹಾಗೆಯೇ ದೇವಸ್ಥಾನದ ಶಾಸ್ತ್ರಿಗಳು ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿ ಆಶೀರ್ವದಿಸಿದರು. ‘ರೋಹಿತಾಶ್ವಿನ್’ ಕನ್ನಡದ ಹೊಸ ಸಿನಿಮಾವನ್ನು ಜೋಸೆಫ್ ನೀನಾಸಂ ನಿರ್ದೇಶಿಸಲಿದ್ದಾರೆ.

ಜಾಹೀರಾತು
ಜಾಹೀರಾತು

ಶಮಂತ್ ಶೆಟ್ಟಿ ಕಟೀಲ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಕಾಂತ್ ರೈ ನಾಯಕ ನಟನಾಗಿ ಹಾಗೂ ವೈ ಜಯಂತಿ ಅಡಿಗ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಮೀನಿನ ನಗರಿ ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ಶುರುವಾಗಿದೆ. ಈ ಸಿನಿಮಾ ತಂಡಕ್ಕೆ ಮೇಗಿನ ಮನೆ ಬಾಲಕೃಷ್ಣ ಶೆಟ್ಟಿ, ಜಗನ್ನಾಥ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಪುತ್ತೂರು ಇನ್ನು ಹಲವು ಪ್ರಮುಖ ಗಣ್ಯರು ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಕರಾವಳಿ ಪ್ರದೇಶದಲ್ಲಿ ಕನ್ನಡ ಸಿನಿಮಾಗಳ ನಿರ್ಮಾಣ ಹೊಸ ಬೆಳವಣಿಗೆ. ಬೆಂಗಳೂರು ಹೊರತುಪಡಿಸಿ ಇತರ ಕಡೆಯಲ್ಲೂ ಸಿನಿಮಾ ನಿರ್ಮಿಸಬಹುದು ಎಂಬುದಕ್ಕೆ ಇದುವೇ ಉದಾಹರಣೆ.