
ಪುತ್ತೂರು ಹಚ್ಚಹಸಿರಿನ ಹಳ್ಳಿಗಳ ನಾಡು, ಆದರೆ ಶೈಕ್ಷಣಿಕವಾಗಿ, ಅರ್ಥಿಕವಾಗಿ ಮುಂದುವರಿದ ಜಿಲ್ಲೆಯ ಎರಡನೆಯ ದೊಡ್ಡ ತಾಲೂಕು. ಆದರೆ ನಾವು ಹೇಳುವ ಗ್ರಾಮದಲ್ಲಿ ನೀರಿನ ಅಭಾವ. ಬಾಯಾರಿಕೆ ನೀಗಿಸಲು ವಲಸೆ ಹೋದ ಹಕ್ಕಿಗಳು ವಾಪಾಸಾಗಿಲ್ಲ . ಅಲ್ಲಿಯೇ ಶಾಶ್ವತವಾಗಿ ನೆಲೆ ನಿಂತಿರುವ ಬಡ ಕುಟುಂಬ ವಲಸೆ ಹೋಗಲು ಸಾಧ್ಯವೆ .?
ಗ್ರಾಮದಲ್ಲಿ ಒಂದು ಗುಡ್ಡಗಾಡು ಪ್ರದೇಶದಲ್ಲಿ ಬಿಸಿಲ ಬೇಗೆಯಿಂದ ತತ್ತರಿಸಿ ಎತ್ತರದ ಪ್ರದೇಶದ ತಪ್ಪಲಿನ ಕುಗ್ರಾಮದಲ್ಲಿ ನೆಲೆಸಿರುವ ಮರಾಟಿ ಸಮುದಾಯದ ಕೆಲವು ಕುಟುಂಬದ ಮನೆಗಳು.. ಅಲ್ಲಿಯ ಮನೆಯ ಜನರ ನೀರಿಗಾಗಿ ಕಷ್ಟ ಪಡುವ ಪರಿಸ್ಥಿತಿ ನೋಡಬೇಕಾದರೆ ಪ್ರತ್ಯಕ್ಷ ಭೇಟಿಯಾದರೆ ಮಾತ್ರ ಅರಿವಾಗಬಹುದು. ಇಂತಹ ಮಾಹಿತಿ ಬಂದ ಕೂಡಲೆ .ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಪುತ್ತೂರು ತಾಲೂಕಿನ ಘಟಕದ ಸದಸ್ಯರು ಪರೀಶಿಲನೆ ಮಾಡಿ ಸಂಪೂರ್ಣ ಮಾಹಿತಿ ಪಡೆದು.

ಸುಮಾರು 12 ವರ್ಷಗಳಿಂದ ನೀರಿಗಾಗಿ ಪರಿತಪಿಸುತ್ತಿರುವ ಈ ಪ್ರದೇಶಕ್ಕೆ ಆಗಮಿಸಿತು. ಆ ಪ್ರದೇಶದ ಜನ ಪೆಬ್ರವರಿ ತಿಂಗಳು ಬಂದರೆ ಸಾಕು ನಾಲ್ಕೈದು ಬಿಂದಿಗೆ ಮನೆಯಲ್ಲಿ ಶೇಖರಣೆ ಮಾಡುವ ಪರಿಸ್ಥಿತಿ, ತನ್ನ ಹೊಟ್ಟೆ ಪಾಡಿಗಾಗಿ ಬೀಡಿ ಉದ್ಯಮ ಮತ್ತು ಕೂಲಿ ಯಿಂದ ಜೀವನ ನಡೆಸುತ್ತಿರುವ ಜನ ನೀರಿಗಾಗಿ ತನ್ನ ಉದ್ಯಮ ವನ್ನು ಬದಿಗಿಟ್ಟು ದೂರದಿಂದ ನೀರು ತರಲು ಅರ್ಧದಿನ ಸಮಯವನ್ನು ಬಳಸಬೇಕಾದ ಪರಿಸ್ಥಿತಿ. ಪಂಚಾಯತ್ ಸರಕಾರದ ಮೂಲಕ ಸುಮಾರು ಖರ್ಚು ಮಾಡಿ ನೀರಿನ ವ್ಯವಸ್ಥೆ ಮಾಡಿದರೂ ಈ ಪ್ರದೇಶಕ್ಕೆ ನೀರು ತಲುಪಲು ಸಾಧ್ಯವಾಗಲು ಕಷ್ಟವಾಗಿತ್ತು.
ಆದರೆ ಇಂತಹ ಬಡವರ ಕಷ್ಟಗಳನ್ನು ಆಲಿಸುವ ಜಿಲ್ಲೆಗೆ ಮನೆಮಾತಾದ ದ.ಕ.ಮರಾಟಿ ಸಂರಕ್ಷಣಾ ಸಮಿತಿ ಸಾಧನೆಗೆ ಅಸಾಧ್ಯವಾದುದು ಯಾವುದೇ ಇಲ್ಲ. ತನ್ನದೆ ಧ್ಯೇಯ ಇಟ್ಟು ಕೊಂಡು ಮುಂದುವರಿಯುತ್ತಿರುವ ಸಮಿತಿ. ರಾತ್ರಿ ಹಗಲು ಅಲ್ಲಿಯ ಸಮುದಾಯದ ಜನರ ಒಟ್ಟಿಗೆ ಚರ್ಚಿಸಿ ನೀರು ನಿಮ್ಮ ಮನೆಗೆ ತಲುಪುವ ಪ್ರಯತ್ನ ನಮ್ಮದು, ಎಲ್ಲದಕ್ಕೂ ನಿಮ್ಮ ಸಹಕಾರ ಅಗತ್ಯ ಎಂದು ನೀಡಿದ ಭರವಸೆಯೊಂದಿಗೆ, ಸಂಪೂರ್ಣ ಸಹಕಾರ ನೀಡಿದ ಅಲ್ಲಿಯ ಜನತೆ ಸುಮಾರು 25,000 ಹಣ ಖರ್ಚು ಮಾಡಿ ಸುಮಾರು 80 ಪೈಪುಗಳ ಜೋಡಣೆಯಿಂದ ಮನೆಯ ಅಂಗಳಕ್ಕೆ ನೀರು ಹರಿಯಲು ಸಹಾಯ ಮಾಡಲು ಸಮಿತಿ ಜೊತೆಗೆ ನಿಂತು ಕಾರ್ಯವನ್ನು ಮುಗಿಸಿದೆ.
12 ವರ್ಷ ಬಾರದ ನೀರು ಕೇವಲ 3 ದಿನಗಳಲ್ಲಿ ಬರಲು ಕಾರಣ ಅಲ್ಲಿಯ ಜನರ ಶ್ರಮ ಮತ್ತು ಸಮಿತಿಯ ನಾಜುಕತೆಯ ಕೆಲಸ. ಶ್ರಮದಿಂದ ಆ ಪ್ರದೇಶ ಜನರ ಕಣ್ಣೀರು ಒರೆಸುವ ಪ್ರಯತ್ನದ ಕೆಲಸಕ್ಕೆ ಇಂದು ದ.ಕ. ಮರಾಟಿ ಸಂರಕ್ಷಣಾ ಸಮಿತಿ ಪುತ್ತೂರು ತಾಲೂಕಿನ ಘಟಕದ ಅಧ್ಯಕ್ಷ ರಾದ ಅಶೋಕ ನಾಯ್ಕ ನೇತೃತ್ವದ ತಂಡದ ಕೆಲಸಕ್ಕೆ ಇಡೀ ಸಮುದಾಯ ಮೆಚ್ಚುಗೆ ವ್ಯಕ್ತಪಡಿಸಿದೆ ಮತ್ತು ಶ್ಲಾಘನೀಯವಾಗಿದೆ.
ಕಹಳೆ ನ್ಯೂಸ್ ವತಿಯಿಂದ ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಪುತ್ತೂರು ಘಟಕಕ್ಕೆ ದೊಡ್ಡ ಸಲಾಂ..!















