
ಐಸಿಸ್ ಉಗ್ರ ಸಂಘಟನೆ ಇದೇ ಮೊದಲ ಬಾರಿಗೆ ಭಾರತದಲ್ಲಿ ನೆಲೆ ಸ್ಥಾಪಿಸಿದೆ ಅನ್ನುವ ಸ್ಫೋಟಕ ಮಾಹಿತಿಯನ್ನ ಹೊರಹಾಕಿದೆ. ಈತ ಐಸಿಸ್ ಉಗ್ರರರೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿತ್ತು. ಸ್ಥಳದಲ್ಲಿ ಸಿಕ್ಕ ದಾಖಲೆಗಳು ಹಾಗೂ ಫೋಟೋಗಳಿಂದ ಮೃತ ಉಗ್ರನನ್ನು ಅಬು ನದಾರ್ ಎಂದು ಗುರುತಿಸಲಾಗಿತ್ತು.
ಕಾಶ್ಮೀರದವನೇ ಆಗಿದ್ದ ಈತನ ಫೋಟೋವನ್ನೇ ಐಸಿಸ್ ಸಂಘಟನೆ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಐಸಿಸ್‍ನ ಮುಖವಾಣಿ ಸಂಸ್ಥೆ ಅಮಾಕ್ ನ್ಯೂಸ್ ಏಜೆನ್ಸಿ ಇದೀಗ ಭಾರತದಲ್ಲಿ ನೂತನ ಪ್ರಾಂತ್ಯವೊಂದನ್ನು ಸ್ಥಾಪಿಸಿರುವುದಾಗಿ ತಿಳಿಸಿದೆ.
ಅಲ್ಲದೆ ತನ್ನ ಹೊಸ ಪ್ರಾಂತ್ಯಕ್ಕೆ ವಿಲಾಯ್ಹ್ ಆಫ್ ಹಿಂದ್ ಎಂದು ಕರೆದುಕೊಂಡಿದ್ದು, ಕಾಶ್ಮೀರದ ಶೋಪಿಯಾನ್ ಹಾಗೂ ಅಮ್ಶಿಪೋರಾದಲ್ಲಿ ಸೇನೆಯ ಮೇಲೆ ದಾಳಿ ನಡೆಸಿದ್ದೇವೆ ಎಂದಿದೆ. ಮೇಲಾಗಿ ಭಾರತೀಯ ಸೇನೆಯ ಕೆಲವರನ್ನು ಕೊಂದಿರುವುದಾಗಿ ಹೊಣೆ ಹೊತ್ತುಕೊಂಡಿದೆ. ಐಸಿಸ್ ಹೀಗೆ ನೆಲೆ ಸ್ಥಾಪಿಸಿ ಅಲ್ಲಿ ತನ್ನ ಚಟುವಟಿಕೆಗಳನ್ನು ವ್ಯಾಪಿಸುತ್ತದೆ. ಅಲ್ಲದೇ ಇಂತಾ ಒಂದು ಕೇಂದ್ರದ ಮೂಲಕವೇ ಇಡೀ ಸಿರಿಯಾವನ್ನೇ ಐಸಿಸ್ ಆಕ್ರಮಿಸಿಕೊಂಡು ಆಡಳಿತ ನಡೆಸಿತ್ತು.
ಇನ್ನೂ ಭದ್ರತಾ ಇಲಾಖೆಗಳಿಗೆ ಐಸಿಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ಸ್ಥಾಪಿಸಿರೋದು ನಿಜಕ್ಕೂ ಸವಾಲಿನ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಆಪರೇಷನ್ ಆಲೌಟ್ ಕಾರ್ಯಾಚರಣೆ ಐಸಿಸ್ ಉಗ್ರರ ವಿರುದ್ಧ ಇನ್ನಷ್ಟು ತೀವ್ರಗೊಳಿಸಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.














