Friday, March 13, 2026
ಸುದ್ದಿ

ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಕುಲದೀಪ್‍ ಸಾವು – ಕಹಳೆ ನ್ಯೂಸ್ –

ಕುಂದಾಪುರ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಜಮ್ಮು ಕಾಶ್ಮೀರದ ಯುವಕ ಮೃತಪಟ್ಟ ಘಟನೆ ಕುಂದಾಪುರದ ಮರವಂತೆ ಎಂಬಲ್ಲಿ ನಡೆದಿದೆ. ಮೃತರನ್ನು ಜಮ್ಮು ಕಾಶ್ಮೀರದ ಕುಲದೀಪ್ ಕುಮಾರ್(31) ಎಂದು ಗುರುತಿಸಲಾಗಿದೆ.

ನಡೆದುಕೊಂಡು ಹೋಗುತ್ತಿದ್ದ ಕುಲದೀಪ್‍ರಿಗೆ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಕುಲದೀಪ್‍ರನ್ನು ಕುಂದಾಪುರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಢಿಕ್ಕಿಯ ಬಳಿಕ ಪರಾರಿಯಾಗಿದ್ದ ಕಾರನ್ನು ಬೈಂದೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು