
ವಿಶ್ವಸಂಸ್ಥೆಯ ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಅಭಿಯಾನಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಝಾ, ಜೊತೆಗೆ ಇ-ಕಾಮರ್ಸ್ ಕ್ಷೇತ್ರದ ಅಲಿಬಾಬ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಪೆಂಗ್ ಲೀ, ಬ್ರಿಟಿಷ್ ನಟ ರಿಚರ್ಡ್ ಕರ್ಟಿಸ್ ಸೇರಿ 17 ಖ್ಯಾತನಾಮರನ್ನು ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರು ರಾಯಭಾರಿಗಳ ನೇಮಕ ಆದೇಶಕ್ಕೆ ಸಹಿ ಹಾಕಿದ್ದು, ಮುಂದಿನ ದಿನಗಳಲ್ಲಿ ಅಭಿಯಾನ ಸದ್ದು ಮಾಡಲಿದೆ ಎಂದು ವಿಶ್ವಸಂಸ್ಥೆಯ ವಕ್ತಾರರ ಕಚೇರಿ ತಿಳಿಸಿದೆ.

ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಪ್ಯಾರಿಸ್ ಒಪ್ಪಂದದಲ್ಲಿ ಸುಸ್ಥಿರ ಅಭಿವೃದ್ಧಿಗೆ ನಿಗದಿಪಡಿಸಿರುವ ಗುರಿಗಳ ಸಾಧನೆಗೆ ರಾಷ್ಟ್ರಗಳನ್ನು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ. “ವಿಶ್ವಸಂಸ್ಥೆಯ ಗೌರವಕ್ಕೆ ಆಭಾರಿಯಾಗಿದ್ದು, ಅಭಿಯಾನಕ್ಕೆ ತಕ್ಕ ನ್ಯಾಯ ಒದಗಿಸಯವೆ” ಎಂದು ದಿಯಾ ಮಿರ್ಝಾ ತನ್ನ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.














