
ಕಳೆದ 25 ವರ್ಷಗಳಿಂದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಯಾವಾಗ ಮದುವೆಯಾಗ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, 53ನೇ ವಯಸ್ಸಿಗೆ ಕಾಲಿಟ್ಟಿರುವ ಸಲ್ಮಾನ್ ಹೆಸರು ಬಾಲಿವುಡ್ ನಟಿಯರ ಜೊತೆ ಕೇಳಿ ಬಂತೇ ವಿನಃ ಮದುವೆಯಾಗುವ ಲಕ್ಷಣಗಳು ಕಾಣಲಿಲ್ಲ. ಇದೀಗ ಇನ್ನೊಂದು ಹೊಸ ಸುದ್ದಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಲ್ಮಾನ್‍ಗೆ ಮಗು ಬೇಕು ಎಂದು ಅನಿಸಿದೆಯಂತೆ. ಆದರೆ ಅದು ಮದುವೆಯಾಗದೆ, ಅಂದ್ರೆ ಬಾಡಿಗೆ ತಾಯಿಯ ಮೂಲಕ ಮುಗುವಿನ ತಂದೆಯಾಗಲು ಬಯಸಿದ್ದಾರೆ ಈ ಬಾಲಿವುಡ್ ಬ್ಯಾಡ್ ಬಾಯ್.

ಸಲ್ಮಾನ್ ಖಾನ್ ಗೆ ಮಕ್ಕಳೆಂದರೆ ತುಂಬಾ ಪ್ರೀತಿಯಂತೆ. ತಮ್ಮ ತಂಗಿ ಅರ್ಪಿತಾ ಖಾನ್ ಮಗ ಅಹಿಲ್ ಎಂದರೆ ಸಲ್ಲುಗೆ ಅಚ್ಚುಮೆಚ್ಚು. ಬಿಡುವಿನ ವೇಳೆಯಲೆಲ್ಲಾ ಅವನೊಂದಿಗೆ ಆಟವಾಡಿಕೊಂಡು ಕಾಲಕಳೆಯುವ ಸಲ್ಮಾನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ.
ಬಾಡಿಗೆ ತಾಯಿ ಮೂಲಕ ಬಾಲಿವುಡ್ ಮಂದಿ ಮಕ್ಕಳನ್ನು ಪಡೆಯುವುದು ಹೊಸದೇನಲ್ಲ, ಶಾರುಕ್ ಖಾನ್ ತಮ್ಮ ಇಬ್ಬರು ಮಕ್ಕಳನ್ನು ಬಾಡಿಗೆ ತಾಯಿಯ ಮೂಲಕವೇ ಪಡೆದಿದ್ದಾರೆ.














