Friday, March 13, 2026
ಸುದ್ದಿ

ಬಿಳಿಯೂರು ಗ್ರಾಮದಲ್ಲಿ ನೂತನ ಭಜನಾ ಮಂದಿರ ನಿರ್ಮಾಣ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನ ಬಿಳಿಯೂರು ಗ್ರಾಮದಲ್ಲಿ ನೂತನ ಭಜನಾ ಮಂದಿರ ನಿರ್ಮಾಣ ಹಂತದಲ್ಲಿದೆ. ಸುಮಾರು 18 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳುತ್ತಿದೆ. ಹಲವಾರು ವರ್ಷಗಳ ತರುವಾಯ ಗ್ರಾಮಸ್ಥರ ಶ್ರಮದ ಫಲವಾಗಿ ಇತ್ತೀಚಿಗೆ ಕಟ್ಟಡದ ಕಾಮಗಾರಿಗೆ ಚಾಲನೆ ದೊರಕಿತು. ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕೇಸ್ತರರಾದ ಚಂದಪ್ಪ ಪೂಜಾರಿ, ಧನ್ಯಕುಮಾರ್ ರೈ ಬಿಳಿಯೂರು ಗುತ್ತು, ಪ್ರಭಾಕರ್ ರೈ ಬಿಳಿಯೂರು, ಯೋಗರಾಜ್ ಜೈನ್ ಮುಂತಾದವರ ಸಮಕ್ಷಮದಲ್ಲಿ ಶಿಲನ್ಯಾಸಗೊಂಡ ಮಂದಿರಕ್ಕೆ ಅಗತ್ಯವಿರುವ ಸ್ಥಳವನ್ನು ಗುತ್ತಿನ ಯಜಮಾನರಾದ ಧನ್ಯ ಕುಮಾರ್ ದಾನವಾಗಿ ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ಹತ್ತು ಹಲವು ಗಣ್ಯರ ಸಹಕಾರದೊಂದಿಗೆ ಗ್ರಾಮಸ್ಥರೇ ಸಕಲ ಜವಾಬ್ದಾರಿಯನ್ನು ಹೊತ್ತು ಕಾಮಗಾರಿ ನಡೆಸುತ್ತಿದ್ದಾರೆ. ಶ್ರೀದೇವಿ ಭಜನಾ ಮಂದಿರ ಕರ್ವೆಲು ಹಾಗೂ ರಾಜಕೇಸರಿ ಬೆಳ್ತಂಗಡಿಯ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಈ ಮಂದಿರಕ್ಕೆ ಶ್ರೀ ವಿಷ್ಣು ಭಜನಾ ಮಂದಿರ ಎಂದು ಹೆಸರಿಡಲಾಗಿದೆ. ಬಿಳಿಯೂರಿನ ಮಂಗಳೂರು ಆಟೋ ವರ್ಕ್ಸ್ ನ ಮಾಲಕ ಸದಾಶಿವ ಶೆಟ್ಟಿ ಅಧ್ಯಕ್ಷರಾಗಿ, ಧನ್ಯಕುಮಾರ್ ರೈ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು