
ತುಳುನಾಡಿನಾದ್ಯಂತ ಸದ್ದು ಮಾಡಿರುವ ಕಟಪಾಡಿ ಕಟ್ಟಪ್ಪ ಸಿನೆಮಾ ಇಂದಿನಿಂದ ಪುತ್ತೂರಿನ ಅರುಣಾ ಚಿತ್ರ ಮಂದಿರದಲ್ಲಿ ಪ್ರರ್ದಶನಗೊಳ್ಳಲಿದೆ. ಕೊಸ್ಟಲ್‍ವುಡ್‍ನ ಯುವ ನಿರ್ದೇಶಕ ಜೆಪಿ ತುಮಿನಾಡ್‍ರ ಚೊಚ್ಚಲ ಚಿತ್ರ ಇದಾಗಿದೆ. ಚರಿಷ್ಮಾ ಸಾಲಿಯಾನ್ ನಾಯಕಿಯಾದ್ರೆ ಉದಯ್ ಪೂಜಾರಿ ನಾಯಕನಾಗಿ ತೆರೆಮೇಲೆ ಮಿಂಚಿದ್ದಾರೆ. ಯಜ್ಞೇಶ್ವರ್ ಬರ್ಕೆ, ವಿಜಯ್ ಕುಮಾರ್, ಕೊಡಿಯಾಲ್ ಬೈಲ್ ಉದಯ್ ಪೂಜಾರಿ ಮೊದಲ ಬಾರಿ ಬಣ್ಣ ಹಚ್ಚಿ ವೀಕ್ಷಕರ ಗಮನ ಸೆಳೆದಿದ್ದಾರೆ. ಭೋಜರಾಜ್ ವಾಮಂಜೂರು ಕಾಮೆಡಿ ಸಿನೆಮಾ ಉದ್ದಕ್ಕೂ ಸಾಗಿದ್ದೂ ಜನರಿಗೆ ಮನೋರಂಜನೆ ನೀಡುವಲ್ಲಿ ಈ ಸಿನೆಮಾ ಯಶಸ್ವಿಯಾಗಿದ್ದು 50 ನೇ ದಿನದತ್ತ ಸಾಗುತ್ತಿರುವ ಈ ವರ್ಷದ ಮೊದಲ ಸಿನೆಮಾವೆ ಎಂಬ ಹೆಗ್ಗಳಿಕೆಗೆ ಕಟಪಾಡಿ ಕಟ್ಟಪ್ಪ ಪಾತ್ರವಾಗಿದೆ.
ರಾಜೇಂದ್ರ ಶೆಣೈ ಫಿಲಂ ಬ್ಯೂರೋ ಕಹಳೆ ನ್ಯೂಸ್ ಪುತ್ತೂರು














