Saturday, March 14, 2026
ಸುದ್ದಿ

ಮೇ 23 ರಂದು ಲೋಕಸಭಾ ಚುನಾವಣೆ ಫಲಿತಾಂಶ : ಪ್ರತಿಬಂಧಕಾಜ್ಞೆ ಜಾರಿ – ಕಹಳೆ ನ್ಯೂಸ್

ಇದೇ ತಿಂಗಳ ಮೇ 23 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶದ ದಿನ ಯಾವುದೇ ಗಲಾಟೆ, ಹಿಂಸಾಚಾರ ನಡೆಯಬಹುದಾದ ಸಾಧ್ಯತೆ ಇದ್ದು, ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ಕೂಡ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಇದರ ಪ್ರಕಾರ ಅಂದು 5 ಕ್ಕಿಂತ ಹೆಚ್ಚು ಜನರ ಗುಂಪು ಒಂದೆಡೆ ಸೇರುವಂತಿಲ್ಲ, ಮೆರವಣಿಗೆ ಹಾಗೂ ಸಭೆ ಸೇರುವಂತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ದೈಹಿಕ ಹಿಂದೆ ಮಾಡುವಂತಹ ಚಾಕು, ದೊಣ್ಣೆ ಮುಂತಾದ ಯಾವುದೇ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ, ಹಾಗೂ ಯಾವುದೇ ಸ್ಪೋಟಕಗಳ ಸಂಗ್ರಹ ಅಥವಾ ಸಿಡಿಸುವಿಕೆ,ಒಯ್ಯುವಿಕೆ ನಿಷಿದ್ದವಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಮೇಲ್ಕಂಡ ನಿಯಮಗಳನ್ನು ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು