Thursday, March 12, 2026
ಸುದ್ದಿ

ಈ ಜನ್ಮದಲ್ಲಿ ರಾಹುಲ್ ಮದ್ವೆ ಆಗಲ್ಲ, ಸಿದ್ದರಾಮಯ್ಯ ಇನ್ನೊಮ್ಮೆ ಸಿಎಂ ಆಗಲ್ಲ: ಈಶ್ವರಪ್ಪ – ಕಹಳೆ ನ್ಯೂಸ್

ಹುಬ್ಬಳ್ಳಿ: ಈ ಜನ್ಮದಲ್ಲಿ ರಾಹುಲ್ ಗಾಂಧಿ ಮದುವೆ ಆಗಲ್ಲ, ಸಿದ್ದರಾಮಯ್ಯ ಇನ್ನೊಮ್ಮೆ ಮುಖ್ಯಮಂತ್ರಿ ಆಗಲ್ಲ ಅಂತಾ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ಪರ ಪ್ರಚಾರ ನಡೆಸಿ ವಾಗ್ದಾಳಿ ನಡೆಸಿದ ಈಶ್ವರಪ್ಪ, ಮೈತ್ರಿಯಲ್ಲಿ ಒಳಗೊಳಗೆ ಬೇಗುದಿ ಇದೆ. ಕಾಂಗ್ರೆಸ್‍ನಲ್ಲಿ ತಮ್ಮ ತಮ್ಮಲ್ಲೇ ಕಿತ್ತಾಡಿಕೊಳ್ತಿದ್ದಾರೆ. ನಾಲ್ಕೈದು ಎಂಎಲ್ಎಗಳು ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತಿದ್ದಾರೆ. ಉಪಚುನಾವಣೆ ಮುಗಿಯುತ್ತಿದ್ದಂತೆ ಎರಡೂ ಪಕ್ಷದವರು ಗುದ್ದಾಡಿಕೊಳ್ತಾರೆ ನೋಡಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಳಗೊಳಗೆ ಈಗಾಗಲೇ ಬುಸುಗುಡುತ್ತಿದ್ದಾರೆ, ಒಬ್ಬರಿಗೊಬ್ಬರಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. 23ಕ್ಕೆ ಲೋಕಸಭಾ ಫಲಿತಾಂಶ ಬಂದ ಕೂಡಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ. ಆಗ ಕುಮಾರಣ್ಣ ನೀ ಎಲ್ಲಿದ್ದಿಯಪ್ಪ ಅಂತ ಸಿದ್ದರಾಮಯ್ಯ ಕೇಳ್ತಾರೆ. ಅದಕ್ಕೆ ಕುಮಾರಣ್ಣ, ನಾನು ರೆಸಾರ್ಟ್‍ನಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ತಿದ್ದೀನಿ ಅಂತಾ ಹೇಳ್ತಾರೆ ಎಂದು ವ್ಯಂಗ್ಯವಾಡಿದರು.

ಜಾಹೀರಾತು
ಜಾಹೀರಾತು