Friday, March 13, 2026
ಸುದ್ದಿ

ISC ಯಲ್ಲಿ 4ನೇ ರ‍್ಯಾಂಕ್ ಪಡೆದು 1 ದಿನಕ್ಕೆ ಡಿಸಿಪಿಯಾದ ವಿದ್ಯಾರ್ಥಿನಿ, ತಂದೆಗೇ ಬಾಸ್ – ಕಹಳೆ ನ್ಯೂಸ್

ಕೊಲ್ಕತ್ತಾ: ಐಎಸ್‍ಸಿ(Indian School Certificate) ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ ನಿನ್ನೆ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಡಿಸಿಪಿ ಆಗಿದ್ರು. ರಿಚಾ ಸಿಂಗ್ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. 4ನೇ ರ‍್ಯಾಂಕ್ ಬಂದ ಹಿನ್ನೆಲೆ ರಿಚಾ ಸಾಧನೆಯನ್ನ ಶ್ಲಾಘಿಸಲು ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಉಪ ಪೊಲೀಸ್ ಕಮಿಷನರ್ ಆಗುವ ಚಾನ್ಸ್ ನೀಡಲಾಗಿತ್ತು.

ಜಿ.ಡಿ. ಬಿರ್ಲಾ ಸೆಂಟರ್ ಫಾರ್ ಎಜುಕೇಷನ್‍ನಲ್ಲಿ ವ್ಯಾಸಂಗ ಮಾಡಿರೋ ರಿಚಾ, ಪ್ಲಸ್ 2 ಪರೀಕ್ಷೆಯಲ್ಲಿ ಶೇ. 99.25 ರಷ್ಟು ಫಲಿತಾಂಶ ಪಡೆದಿದ್ದಾರೆ. ನಿನ್ನೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ರಿಚಾ ಕೊಲ್ಕತ್ತಾ ಆಗ್ನೇಯ ವಿಭಾಗದ ಡಿಸಿಪಿ ಕುರ್ಚಿಯನ್ನ ಅಲಂಕರಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಅಂದ್ರೆ ರಿಚಾ ತಂದೆ ರಾಜೇಶ್ ಸಿಂಗ್, ಗರಿಯಾಹತ್ ಪೊಲೀಸ್ ಠಾಣೆಯ ಹೆಚ್ಚುವರಿ ಉಸ್ತುವಾರಿ ಅಧಿಕಾರಿ. ಆಗ್ನೇಯ ವಿಭಾಗದ ಡಿಸಿ ಕಲ್ಯಾಣ್ ಮುಖರ್ಜಿ ಹಾಗೂ ವಿವಿಧ ಪೊಲೀಸ್ ಠಾಣೆಗಳ ಉಸ್ತುವಾರಿ ಅಧಿಕಾರಿಗಳ ಜೊತೆಗೆ ರಾಜೇಶ್ ಸಿಂಗ್ ನಿನ್ನೆ ಮಗಳನ್ನ ಸನ್ಮಾನಿಸಿದ್ರು.

ಜಾಹೀರಾತು
ಜಾಹೀರಾತು

ಇನ್ನು ಒಂದು ದಿನದ ಮಟ್ಟಿಗೆ ತಂದೆಗೇ ಬಾಸ್ ಆಗಿದ್ದ ರಿಚಾರನ್ನ, ನಿಮ್ಮ ತಂದೆಗೆ ಏನಾದ್ರೂ ಆದೇಶ ನೀಡಲು ಬಯಸುತ್ತೀರಾ ಅಂತ ಕೇಳಿದಾಗ, ಬೇಗ ಮನೆಗೆ ಬನ್ನಿ ಅಂತ ಆದೇಶಿಸುತ್ತೇನೆ ಅಂದ್ರು. ರಿಚಾ ಇತಿಹಾಸ ಹಾಗೂ ಸಮಾಜಶಾಸ್ತ್ರದಲ್ಲಿ ವ್ಯಾಸಂಗ ಮುಂದುವರೆಸಿ, ಯುಪಿಎಸ್‍ಸಿ ಪರೀಕ್ಷೆ ತೆಗೆದುಕೊಷ್ಟು ಪ್ಲಾನ್ ಹೊಂದಿದ್ದಾರಂತೆ.

ಮಗಳ ಸಾಧನೆ ಬಗ್ಗೆ ಮಾತನಾಡಿದ ರಾಜೇಶ್ ಸಿಂಗ್, ನನಗೆ ಎಷ್ಟು ಖುಷಿಯಾಗ್ತಿದೆ ಅಂತ ಹೇಳಿಕೊಳ್ಳಲು ಆಗ್ತಿಲ್ಲ. ಒಂದು ದಿನದ ಮಟ್ಟಿಗೆ ನನಗೇ ಹಿರಿಯ ಅಧಿಕಾರಿಯಾಗಿದ್ದಾಳೆ. ಮನೆಗೆ ಬೇಗ ಬರುವಂತೆ ನನಗೆ ಆದೇಶಿಸಿದ್ದಾಳೆ. ಇವತ್ತು ಅದನ್ನ ಪಾಲಿಸುತ್ತೇನೆ ಅಂತ ಹೇಳಿದ್ರು.