Friday, March 13, 2026
ಸುದ್ದಿ

2019 ರ ಐಪಿಎಲ್ ಫೈನಲ್ ಪಂದ್ಯದ ವೀಕ್ಷಣೆಗೆ ಟಿಕೆಟ್ ಖಾಲಿ: ಕಂಗಾಲಾದ ಅಭಿಮಾನಿಗಳು – ಕಹಳೆ ನ್ಯೂಸ್

ಭಾನುವಾರ ಹೈದರಾಬಾದ್ ನಲ್ಲಿ ನಡೆಯುವ ಐಪಿಎಲ್ 2019 ರ ಫೈನಲ್ ಪಂದ್ಯದ ವೀಕ್ಷಣೆಗೆ ಟಿಕೆಟ್ ಖಾಲಿಯಾಗಿದೆ ಎಂಬ ಸುದ್ದಿ ಅಭಿಮಾನಿಗಳನ್ನ ಕಂಗಾಲಾಗುವಂತೆ ಮಾಡಿದೆ.

ಮಂಗಳವಾರ ಬೆಳಿಗ್ಗೆ ಐಪಿಎಲ್ ಫೈನಲ್ ಪಂದ್ಯಾವಳಿಯ ವೀಕ್ಷಣೆಗೆ ಟಿಕೆಟ್ ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಆನ್ ಲೈನ್ ನಲ್ಲಿ ಖರೀದಿಗೆ ಅಭಿಮಾನಿಗಳು ಮುಗಿಬಿದ್ದಿದ್ದರು. ಟಿಕೆಟ್ ಮಾರಾಟ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಟಿಕೆಟ್ ಖಾಲಿಯಾಗಿದೆ ಎಂಬ ವಿಷಯ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೈದರಾಬಾದ್ ಕ್ರಿಕೆಟ್ ಸಮಿತಿಯ ಕಾರ್ಯಕಾರಿ ಮಾಜಿ ಸದಸ್ಯರೊಬ್ಬರು ಫೈನಲ್ ಪಂದ್ಯಾವಳಿಯ ಟಿಕೆಟ್ ಬುಕಿಂಗ್ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಖಾಲಿಯಾಗಲು ಹೇಗೆ ಸಾಧ್ಯವೆಂದು ಆಶ್ಚರ್ಯಪಟ್ಟಿದ್ದಾರೆ. ಹೈದರಾಬಾದ್ ನಲ್ಲಿನ ಕ್ರಿಕೆಟ್ ಮೈದಾನದಲ್ಲಿ 39 ಸಾವಿರ ಜನ ಏಕಕಾಲದಲ್ಲಿ ಕುಳಿತು ವೀಕ್ಷಿಸಬಹುದು.

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ 25 ರಿಂದ 30 ಸಾವಿರ ಟಿಕೆಟ್ ಗಳು ಮಾರಾಟವಾಗುತ್ತದೆ. ಟಿಕೆಟ್ ಮಾರಾಟವಾದ ಮಾಹಿತಿಯನ್ನ ಆನ್ ಲೈನ್ ನಲ್ಲಿ ತಿಳಿಸಬೇಕು. ಆದರೆ ಯಾವ ಮಾಹಿತಿಯು ಲಭ್ಯವಾಗದಿರುವುದು ಆಶ್ಚರ್ಯವಾಗಿದೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಸಾಮಾನ್ಯವಾಗಿ 1000, 1500, 2000, 5000, 10000, 12500, 15000, 22500 ರೂ.ಗಳ ಟಿಕೆಟ್ ಗಳನ್ನ ಮಾರಾಟ ಮಾಡಲಾಗುತ್ತವೆ. ಫೈನಲ್ ಪಂದ್ಯದ ಟಿಕೆಟ್ ಮಾರುವ ಸಂಸ್ಥೆ ಇವೆಂಟ್ಸ್ ನೌ, ಎಷ್ಟು ಮಾರಾಟ ಮಾಡಲಾಗಿದೆ ಎಂಬುದರ ಮಾಹಿತಿ ಕೊಡಬೇಕಿತ್ತು. ಬದಲಿಗೆ ಅದು ಕೇವಲ 1500, 2000, 2500, 5000 ಟಿಕೆಟ್ ಮಾರಾಟದ ಬಗ್ಗೆ ಮಾತ್ರ ಮಾಹಿತಿ ಪ್ರಕಟಿಸಿದೆ. ಹಾಗಾದರೆ ಉಳಿದ ಟಿಕೆಟ್ ಗಳು ಏನಾದವು ಎಂಬುದು ಅಭಿಮಾನಿಗಳು ಪ್ರಶ್ನೆಯಾಗಿದೆ.

ಆದರೆ ಟಿಕೆಟ್ ಮಾರಾಟ ಸಂಸ್ಥೆ ಈ ಬಗ್ಗೆ ಬಿಸಿಸಿಐಯನ್ನೇ ಕೇಳಬೇಕು. ನಮಗೆ ಟಿಕೆಟ್ ಮಾರಾಟ ಮಾಡುವ ಜವಾಬ್ದಾರಿ ಕೊಡಲಾಗಿದೆ ಅದನ್ನ ನಾವು ನಿಭಾಯಿಸಿದ್ದೇವೆ. ಟಿಕೆಟ್ ಹೇಗೆ ಖಾಲಿಯಾಯಿತು ಎಂಬ ಮಾಹಿತಿಯನ್ನ ಬಿಸಿಸಿಐ ನೀಡಬೇಕು ಎಂದು ಸ್ಪಷ್ಟಪಡಿಸಿದೆ.