Thursday, March 12, 2026
ಸುದ್ದಿ

ಎಚ್.ಡಿ.ದೇವೇಗೌಡರಿಗೆ ಕಾಪುವಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಮತ್ತೆ ಪ್ರಕೃತಿ ಚಿಕಿತ್ಸೆ – ಕಹಳೆ ನ್ಯೂಸ್

ಬೆಂಗಳೂರು – ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉಡುಪಿ ಬಳಿಯ ಕಾಪುವಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಮತ್ತೆ ಪ್ರಕೃತಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ದೇವೇಗೌಡರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಪ್ರಕೃತಿ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಚನ್ನಮ್ಮ ಅವರೂ ಕೂಡ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸುಮಾರು ಒಂದು ವಾರ ಕಾಲ ಪ್ರಕೃತಿ ಚಿಕಿತ್ಸೆಯನ್ನು ಗೌಡರು ಪಡೆದುಕೊಂಡಿದ್ದರು. ಮತ್ತೆ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಗೌಡರು ಮೇ 16 ರವರೆಗೂ ಚಿಕಿತ್ಸಾಲಯದಲ್ಲೇ ವಿಶ್ರಾಂತಿ ಪಡೆದು ಅಂದು ಸಂಜೆ ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿದೆ ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು

ಕಳೆದ ವಾರ ದೇವೇಗೌಡ ಅವರು ರೆಸಾರ್ಟ್ ನಲ್ಲೇ ಚಿಕಿತ್ಸೆ ಪಡೆದಿದ್ದರು. ಅಂದು ದೇವೇಗೌಡರಿಗೆ ಸಿಎಂ ಕುಮಾರಸ್ವಾಮಿ ಸಾಥ್ ನೀಡಿದ್ದರು. ಈಗ ದೇವೇಗೌಡರು ತಮ್ಮ ಕೋರ್ಸ್ ಪೂರ್ಣಗೊಳಿಸಲು ತಮ್ಮ ಪತ್ನಿ ಚನ್ನಮ್ಮ ಅವರ ಜೊತೆ ಆಗಮಿಸಿದ್ದಾರೆ.

ದೇವೇಗೌಡ ಅವರು ಇಂದು ಅಥವಾ ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಕೊಲ್ಲೂರಿನ ಮುಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ ನಡೆಸಲಿದ್ದಾರೆ.