
ಒಬ್ಬ ಕಲಾವಿದನಿಗೆ ಒಂದೇ ಒಂದು ಆಸೆ ಇರುತ್ತದೆ. ಅದು ಒಂದೊಳ್ಳೆ ಪಾತ್ರ ಸಿಗಬೇಕು ಎಂಬುದು. ಆ ರೀತಿ ಮನಸ್ಸಿಗೆ ಖುಷಿ ಕೊಡುವ ಪಾತ್ರ ಸಿಕ್ಕರೆ ಕಲಾವಿದನಿಗೆ ಅದಕ್ಕಿಂತ ದೊಡ್ಡದು ಯಾವುದು ಇಲ್ಲ. ತಾನು ಮಾಡುವ ಚಿತ್ರದಿಂದ ಜನರ ಮನಸ್ಸಿಗೆ ಹತ್ತಿರ ಆಗ್ಬೇಕು ಅನ್ನೊದು ಎಲ್ಲಾ ಕಲಾವಿದರ ಆಸೆ ಕೂಡ. ಅಂತವರಲ್ಲ್ಲಿ ಸ್ವರ್ಗಿಯರಾದ ಕಾಶಿನಾಥ್ ಒಬ್ಬರು . ಹೌದು ಕಾಶಿನಾಥ್ ಅವರು ಅಭಿನಯುಸುತ್ತಿದ್ದ ಸಿನೇಮಾಗಳಲ್ಲಿ ಸಾಮನ್ಯವಾಗಿ ಒಂದೇ ತರಹದ ಪಾತ್ರಗಳನ್ನು ನಟಿಸುತಿದ್ದರು. ಆದ್ರೆ ಆ ಸಿನಿಮಾಗಳ ಪೈಕಿ ಅವರನ್ನು ಜನರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡಿತು . ಅದೆ ಚೌಕ ಸಿನೆಮಾದ ಅಪ್ಪನ ಪಾತ್ರ. ಅದರ ಜೊತೆಗೆ ಇತ್ತೀಚಿಗಷ್ಟೆ ಈ ಪಾತ್ರಕ್ಕಾಗಿ ಕಾಶೀನಾಥ್ ಅವರಿಗೆ ಅತ್ಯುತ್ತಮ ಪೋಷಕ ನಟ ಸೈಮಾ ಪ್ರಶಸ್ತಿ ಲಭಿಸಿದೆ.

ಕಾಶಿನಾಥ್ ಅವರು ಮಾಡಿದ ಪಾತ್ರದ ಬಗ್ಗೆ ಮೊದಲಿಗೆ ಕಾಶಿನಾಥ್ ಅವರಿಗೆ ಹೇಳಲು ತರುಣ್‍ಗೆ ಧೈರ್ಯ ಇರಲಿಲ್ಲವಂತೆ. ಹಾಗಾಗಿ ಅವರ ಸ್ನೇಹಿತರಾದ ಕಾಶಿನಾಥ್ ಅವರ ಮಗ ಅಭಿಮನ್ಯುವಿನ ಬಳಿ ಹೇಳಿ ಒಪ್ಪಿಸಿದ್ದರಂತೆ. ಒಬ್ಬ ನಟ ಅವರಾಗಿಯೇ ಒಂದು ಇಮೇಜ್‍ಗೆ ಬಂದಿರೋದಿಲ್ಲ. ನನಗೆ ಒಂದು ನಂಬಿಕೆ ಏನು ಅಂದ್ರೆ, ಒಬ್ಬ ಹಾಸ್ಯ ಮಾಡುವವನು ಎಮೋಷನ್ ಅನ್ನು ಕೂಡ ಅಷ್ಟೇ ಚೆನ್ನಾಗಿ ಮಾಡ್ತಾನೆ ಅಂತ. ಒಮ್ಮೆ ಚಿತ್ರದ ಒಂದು ಪಾತ್ರಕ್ಕೆ ಕಾಶೀನಾಥ್ ಸರ್ ನೆನಪಾದರು. ಎಂದು ಚೌಕ ಸಿನಿಮಾದ, ಕಾಶಿನಾಥ್ ಅವರ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ ನಿರ್ದೆಶಕ ತರುಣ್ ಸುಧೀರ್.
ಇದೀಗ ಚೌಕ ಚಿತ್ರದ ನಂತರ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರವನ್ನು ನಿರ್ದೇಶಿಸಲು ಹೋರಟಿರುವ ತರುಣ್ ಸುದೀರ್ ಚೌಕ ಚಿತ್ರದ ರಾಬರ್ಟ್ ಪಾತ್ರದ ಹೆಸರನ್ನು ಬಳಸಿಕೊಂಡಿರೋದು ವಿಶೇಷ. ಚೌಕ ಚಿತ್ರದಲ್ಲಿ ರಾಬರ್ಟ್ ಪಾತ್ರ ಪರಿಚಯಿಸಿದ್ದು ಕಾಶಿನಾಥ್ ಎನ್ನುವುದು ಇನ್ನೊಂದು ವಿಶೇಷ. ಆ ರಾಬರ್ಟ್‍ಗೂ, ಈ ರಾಬರ್ಟ್‍ಗೂ ಏನು ಸಂಬಂಧವಿಲ್ಲ ಅಂತಾ ಹೇಳ್ತಿದ್ದಾರೆ ಚಿತ್ರತಂಡ .ಮುಂದಿನ ದಿನಗಳಲ್ಲಿ ಈ ಬಗೆಗಿನ ಸುದ್ಧಿ ಹೊರ ಬಿಳುತ್ತಾ..? ಎಂದು ಕಾದು ನೋಡಬೇಕಾಗಿದೆ.














