
ಸ್ಯಾಂಡಲ್‍ವುಡ್‍ನಲ್ಲಿ ಕೆಲ ಸಮಯದ ಹಿಂದೆ ಒಂದೇ ರೀತಿಯ ಟೈಟಲ್‍ಗೆ ಬೇಕಾಗಿ ಭಾರೀ ಗುದ್ದಾಟಗಳು ನಡೆಯುತ್ತಿತ್ತು. ಆದರೆ ಈಗ ಪ್ರಸಿದ್ಧ ಹಳೇ ಚಿತ್ರಗಳ ಹೆಸರನ್ನೇ ಪುನಃ ಹೊಸ ಚಿತ್ರಕ್ಕಿಡುವ ಟ್ರೆಂಡ್ ಜೋರಾಗೇ ಇದೆ.

ಹೊಸ ವಿಷ್ಯ ಏನಂದ್ರೆ ಒಂದೇ ರೀತಿಯ ಶೀರ್ಷಿಕೆಯನ್ನು ಹೋಲುವ ಚಿತ್ರಗಳು ಒಂದರ ಹಿಂದೆ ಒಂದರಂತೆ ಸಟ್ಟೇರುತ್ತಿದೆ. ಅದರಲ್ಲಿ ಮೊತ್ತಮೊದಲೆನೆಯದಾಗಿ ಸತೀಶ್ ನಿನಾಸಂ ನಾಯನಾಗಿ ಹಾಗು ಮೊದಲ ಬಾರಿಗೆ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘ಮೈ ನೇಮ್ ಈಸ್ ಸಿದ್ದೇಗೌಡ’. ಸತೀಶ್ ನಿನಾಸಂ ಕೆರಿಯರ್‌ನ ಮೊದಲ ಬ್ಲಾಕ್‍ಬಸ್ಟರ್ ‘ಅಯೋಗ್ಯ’ ಚಿತ್ರದಲ್ಲಿ ಸತೀಶ್ ಹೇಳುವ ಖಡಗ್ ಡೈಲಾಗೇ ಇಂದು ‘ಮೈ ನೇಮ್ ಈಸ್ ಸಿದ್ದೇಗೌಡ’ ಆಗಿ ಮೂಡಿಬರುತ್ತಿದೆ.

ಎರಡನೆಯದಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಚಿತ್ರಗಳಲ್ಲಿ ಎರಡೇ ಚಿತ್ರಗಳು ರೀಮೇಕ್ ಆಗಿದ್ದವು. ಆ ಎರಡು ಚಿತ್ರಗಳು ಭರ್ಜರಿ ಯಶಸ್ಸನ್ನು ಪಡೆದುಕೊಂಡಿತ್ತು. ಇದೀಗ ಅದರಲ್ಲಿ ಕಿರಾತಕನಿಗೆ ಸೀಕ್ವೆಲ್ ಭಾಗ್ಯ ಸಿಕ್ಕಿರುವುದು ವಿಶೇಷ. ಈ ಚಿತ್ರಕ್ಕೆ ಕಿರಾತಕ 2 ಮತ್ತು ಕಿರಾತಕ ಇನ್ ದುಬೈ ಎಂದು ಟೈಟಲ್ ಇಡಲು ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಅಂತಿಮವಾಗಿ ‘ಮೈ ನೇಮ್ ಈಸ್ ಕಿರಾತಕ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಈಗಾಗಲೇ ಮುಹೂರ್ತ ಆಚರಿಸಿಕೊಂಡಿರುವ ಚಿತ್ರತಂಡ ಕೆಜಿಎಫ್ 2 ಮುಗಿದ ಬಳಿಕ ಪುನಃ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.
ಮೂರನೆಯದಾಗಿ ರಾಜ್‍ಸೂರ್ಯ ಎಂಬ ಹೊಸ ಪ್ರತಿಭೆ ‘ಮೈ ನೇಮ್ ಈಸ್ ರಾಜ್’ ಎಂಬ ಎಂಟರ್‍ಟೈನಿಂಗ್ ಫಿಲಂ ಅನ್ನು ಮಾಡಿ ಮುಗಿಸಿದ್ದಾರೆ. ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.
ಭಾರವಿ, ಫಿಲಂ ಬ್ಯೂರೋ, ಕಹಳೆ ನ್ಯೂಸ್.














