Friday, March 13, 2026
ಸುದ್ದಿ

‘ನಾನು ಭಯೋತ್ಪಾದಕನಲ್ಲ’; ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ವ್ಯಕ್ತಿಯಿಂದ ಪೊಲೀಸರಿಗೆ ಸ್ಪಷ್ಟನೆ – ಕಹಳೆ ನ್ಯೂಸ್

ಬೆಂಗಳೂರು: ಸೋಮವಾರ ಸಂಜೆ ಸುಮಾರು 7.30ರ ಸಮಯದಲ್ಲಿ ವ್ಯಕ್ತಿಯೊಬ್ಬ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಪ್ರವೇಶ ದ್ವಾರದ ಬಳಿ ಬಂದಿದ್ದಾನೆ. ಈ ವೇಳೆ ಲೋಹ ಪರಿಶೋಧಕ (ಮೆಟಲ್ ಡಿಟೆಕ್ಟರ್) ಯಂತ್ರದ ಮೂಲಕ ಒಳಬರುವವರನ್ನು ಸಿಬ್ಬಂದಿ ತಪಾಸಣೆ ಮಾಡುವಂತೆ ಈತನನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಶಂಕಿತ ವ್ಯಕ್ತಿಯ ಸೊಂಟದ ಭಾಗದಲ್ಲಿ ಶಂಕಾಸ್ಪದ ವಸ್ತು ಇರುವುದು ಡಿಟೆಕ್ಟರ್ನಿಂದ ಪತ್ತೆಯಾಗಿದೆ. ಆತನನ್ನು ತಡೆದ ಸಿಬ್ಬಂದಿ ಮತ್ತೆ ಪರೀಕ್ಷಿಸಿದ್ದಾರೆ.
ಈ ವೇಳೆಯೂ ಶಬ್ದ ಬಂದಿದೆ. ಅರೆಬಿಕ್ ಶೈಲಿಯಲ್ಲಿ ವೇಷಭೂಷಣ ತೊಟ್ಟಿದ್ದ ಶಂಕಿತ ವ್ಯಕ್ತಿ ನಂತರ ತಾನು ಹಾಕಿದ್ದ ಕಂದೂರ್ (ಉದ್ದವಾದ ಶರ್ಟ್) ಎತ್ತಿ ತೋರಿಸಲು ಮುಂದಾಗಿದ್ದಾನೆ. ನಂತರ ಕೆಲ ಸೆಕೆಂಡುಗಳಲ್ಲಿ ಅಲ್ಲಿಂದ ಹೊರಹೋಗಿದ್ದಾನೆ. ಆತನ ಬಳಿ ಬಂದೂಕು ಇತ್ತು ಎಂದು ಅನೇಕರು ಬಣ್ಣಿಸಿದ್ದರು.
ಆದರೆ ನಗರದ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಶಂಕಿತ ವ್ಯಕ್ತಿ ಪೊಲೀಸರ ಮುಂದೆ ಹಾಜರಾಗಿದ್ದು, ಸ್ಪಷ್ಟನೆ ನೀಡಿದ್ದಾನೆ. ನಾನು ಭಯೋತ್ಪಾದಕನಲ್ಲ. ಮಾಧ್ಯಮದವರು ನನ್ನನ್ನು ಹಾಗೆ ಬಿಂಬಿಸಿದ್ದಾರೆ ಎಂದಿದ್ದಾನೆ.

ಶಂಕಿತ ರಿಯಾಜ್ ಅಹಮದ್ ಚಂದ್ರಾ ಲೇ ಔಟ್​ ನಿವಾಸಿಯಾಗಿದ್ದು, ಮೆಜೆಸ್ಟಿಕ್​ಮನಲ್ಲಿ ವಾಚ್ ರಿಪೇರಿ ಕೆಲಸ ಮಾಡುತ್ತಿದ್ದ. ಆತನ ಬಳಿ ಬಿಬಿಎಂಪಿ ಲೈಸನ್ಸ್ ಕೂಡ ಇದೆ. ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದ ಸುದ್ದಿ ನೋಡಿ ಆತಂಕ್ಕೆ ಒಳಗಾದ ಆತ ಉಪ್ಪಾರ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ನನ್ನ ಮನೆ ಚಂದ್ರಾ ಲೇ ಔಟ್ ನಲ್ಲಿ ಇದೆ. ನಾನು ಮೆಜೆಸ್ಟಿಕ್ ನ ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸೋಮವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳು ಮೆಟ್ರೋ ನಿಲ್ದಾಣಕ್ಕೆ ಬಂದೆ. ನನ್ನ ಬಳಿ ಮೆಟ್ರೋ ಸಿಬ್ಬಂದಿ ಬಹಳ ಅನುಚಿತವಾಗಿ ವರ್ತಿಸಿದ್ದರು. ನಾನು ಭಯೋತ್ಪಾದಕನಲ್ಲ. ಮಾಧ್ಯಮಗಳಲ್ಲಿ ನನ್ನನ್ನು ಹಾಗೆ ಬಿತ್ತರ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ವಿಚಾರ ತಿಳಿದು ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದೇನೆ. ನನ್ನ ಆಧಾರ್ ಕಾರ್ಡ್, ಪಾನ್ಕಾರ್ಡ್ ಎಲ್ಲವನ್ನೂ ಸಹ ಪೊಲೀಸರಿಗೆ ಕೊಟ್ಟಿದ್ದೇನೆ,” ಎಂದು ರಿಯಾಜ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು