Friday, March 13, 2026
ಸುದ್ದಿ

ʼಬುಲೆಟ್‌ʼ ಬೈಕ್‌ ಮಾಲೀಕರು ತಪ್ಪದೆ ಓದಿ ಈ ಸುದ್ದಿ – ಕಹಳೆ ನ್ಯೂಸ್

ರಾಯಲ್ ಎನ್‍ಫೀಲ್ಡ್ ಬುಲೆಟ್ ಹಾಗೂ ಬುಲೆಟ್ ಎಲೆಕ್ಟ್ರಾ ಮಾದರಿಯ 7 ಸಾವಿರ ಬೈಕ್‍‌ ಗಳಲ್ಲಿ ದೋಷ ಕಾಣಿಸಿಕೊಂಡಿದ್ದು, ಹತ್ತಿರದ ಸರ್ವಿಸ್ ಸ್ಟೇಷನ್‍ ಗಳಲ್ಲಿ ದುರಸ್ತಿಪಡಿಸಿಕೊಳ್ಳುವಂತೆ ಕಂಪನಿ ಕರೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

2019 ರ ಮಾರ್ಚ್ 20 ಮತ್ತು ಏಪ್ರಿಲ್ 30ರ ಅವಧಿಯಲ್ಲಿ ಉತ್ಪಾದನೆಯಾಗಿರುವ ಈ ಎರಡು ಮಾದರಿಯ ಬೈಕ್‍ ಗಳಲ್ಲಿ ಬ್ರೇಕ್ ಕ್ಯಾಲಿಪರ್ ಬೋಲ್ಟ್ ನಲ್ಲಿ ಸಮಸ್ಯೆ ಇರುವುದರಿಂದಾಗಿ ಈ ಕರೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಜಾಹೀರಾತು
ಜಾಹೀರಾತು

ವೆಂಡರ್ ಕಂಪನಿ ಪೂರೈಕೆ ಮಾಡಿದ್ದ ಬ್ರೇಕ್ ಕ್ಯಾಲಿಪರ್ ಬೋಲ್ಟ್ ಗಳಲ್ಲಿ ಕೆಲವು ರಾಯಲ್ ಎನ್‍ಫೀಲ್ಡ್ ಗುಣಮಟ್ಟಕ್ಕೆ ಸಮನಾದುದಾಗಿರಲಿಲ್ಲ. ಹೀಗಾಗಿ ಅದನ್ನು ಬದಲಿಸುವ ಅಗತ್ಯವಿದೆ ಎಂಬುದಾಗಿ ಕಂಪನಿ ಹೇಳಿಕೊಂಡಿದೆ.