Tuesday, March 17, 2026
ಸುದ್ದಿ

ಸಾಂಪ್ರದಾಯದ ಸೋಗಡನ್ನ ನೆನಪಿಸಿದ ವಿಶೇಷ ಮದುವೆ – ಕಹಳೆ ನ್ಯೂಸ್

ಏಳು ಹೆಜ್ಜೆಯ ಸಪ್ತಪದಿ ತುಳಿದು ಏಳೇಳು ಜನ್ಮದಲ್ಲಿಯು ಒಂದಾಗಿರಬೇಕು ಅನ್ನೋ ಕನಸನ್ನ ಕಟ್ಟಿಕೊಂಡು ಮದುವೆ ಆಗ್ತಾರೆ, ಅದೊಂದು ಅವಿಸ್ಮರಣೀಯ ಕ್ಷಣವು ಹೌದು. ಉಡುಪಿಯಲ್ಲೊಂದು ಹಳೆ ಸಾಂಪ್ರದಾಯವನ್ನ ಮತ್ತೆ ನೆನಪಿಸುವಂತ ಮದುವೆ ನಡೆದಿದೆ. ಮದುವೆ ಕೇವಲ ವಧು ವರರ ಪಾಲಿಗಲ್ಲ, ಊರವರಿಗೆಲ್ಲಾ ಇದು ಸದಾ ನೆನಪಿನಲ್ಲುಳಿಯುವಂತಹಾ ಮದುವೆಯಾಗಿ ಮೂಡಿಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆ ಮಂಟಪಕ್ಕೆ ಬಂದ ಮಹಿಳೆಯರಿಗೆ ಕೈ ತುಂಬಾ ಬಳೆ, ಮುಡಿ ತುಂಬ ಮಲ್ಲಿಗೆಯ ಅಲಂಕಾರ, ಹಳೆ ತಲೆಮಾರಿನ ಅಮ್ಮಂದಿರಿಗೆ ಶೋಭಾನ ಹಾಡುವ ಸ್ಪರ್ಧೆ.. ಮತದಾನ ಮಾಡಿದವರಿಗೆ 250 ರುಪಾಯಿ ಮೌಲ್ಯದ ಪುಸ್ತಕ ಹೀಗೊಂದು ಅಪರೂಪದ ಮದುವೆ ನಡೆದದ್ದು ಕುಂದಾಪುರದಲ್ಲಿ. ಕೆಂಚನೂರು ಗಣೇಶ್ ಮತ್ತು ಪೂರ್ಣಿಮಾ ಅವರು ಎಲ್ಲರಿಗಿಂತ ವಿಶೇಷವಾಗಿ ಮದುವೆಯಾಗಬೇಕು ಅಂದ್ಕೊಂಡಿದ್ದರು. ಯೋಚನೆಯಂತೆಯೇ ನಡೆದ ಈ ವಿಶೇಷ ಮದುವೆ ಸಾಂಪ್ರದಾಯಿಕ ಸೊಗಡನ್ನು ಮತ್ತೆ ನೆನಪು ಮಾಡಿಕೊಟ್ಟಿದೆ.

ಜಾಹೀರಾತು
ಜಾಹೀರಾತು

ಗ್ರಾಮೀಣ ಸೊಗಡಿನ ಪರಿಕರಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯ ನೀಡಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರದರ್ಶನವೂ ಏರ್ಪಾಟಾಗಿತ್ತು. ಶಿಕ್ಷಕ ಶ್ರೀನಿವಾಸ ಸೂರ್ಗೋಳಿ ಅವರು ಸಂಗ್ರಹಿಸಿದ್ದ ಅಪರೂಪದ ಅನ್ನದ ಚಟ್ಟಿ, ಅನ್ನದ ಸಿಬ್ಬಲು, ಚರಕ, ಕೈಮರ್ಗಿ, ಯಕ್ಷಗಾನ ಕಿರೀಟ, ಯಕ್ಷಗಾನದ ಕಸೆ ಸೀರೆ ಮೊದಲಾದ 250 ಕ್ಕೂ ಮಿಕ್ಕಿದ ಪರಿಕರಗಳ ಪ್ರದರ್ಶನಕ್ಕೆ ಯುವ ಜನತೆ ಫಿದಾ ಆದ್ರು. ಗಂಡು ಮತ್ತು ಹೆಣ್ಣಿನ ಮನೆಯವರ ನಡುವೆ ಅಂತ್ಯಾಕ್ಷರಿ ಸ್ಪರ್ಧೆ, ಹಿರಿಯರು ಹಾಡಿದ ಶೋಭಾನೆಯ ಗೀತೆಗಳು ಮದುವೆಗೆ ಬಂದವರನ್ನು ಸಾಕಷ್ಟು ರಂಜಿಸಿತ್ತು.

ಮದುವೆಗೆ ಬಂದವರಿಗೆ ಊಟವೂ ಕೂಡಾ ಡಿಫರೆಂಟ್ ಆಗಿರಬೇಕು ಅನ್ನೋದು ವಧು ವರರ ಯೋಚನೆಯಾಗಿತ್ತು. ಅದಕ್ಕೆ ತಕ್ಕಂತೆ ಪಕ್ಕಾ ದೇಸಿ ಶೈಲಿಯ ಕುಂದಾಪುರ ಗ್ರಾಮೀಣ ಭಾಗದ ಊಟ-ಉಪಹಾರ, ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ ಉಪಹಾರಕ್ಕೆ ಹಳ್ಳಿ ಶೈಲಿಯ ಜ್ಯೂಸ್, ಗೋಲಿ ಸೋಡ, ಮಜ್ಜಿಗೆ, ಕಾಶ್ಮೀರಿ ಟೀ, ಸಕ್ಕರೆ ಪೀಪಿ, ಬೆಂಕಿ ಬೀಡಾ, ಬಾಳೆಹಣ್ಣು ವ್ಯವಸ್ಥೆ ಇತ್ತು. ಮಧ್ಯಾಹ್ನದ ಊಟಕ್ಕೆ ಗೇರು ಹಣ್ಣಿನ ಹುಳಿ, ಕಾಮಧೇನು ಮೊಸರು, ಖಾರದ ಹಪ್ಪಳ, ಶೇಂಗಾ ಕೊಸಂಬರಿ ಐಟಂಗಳು ಹೊಟ್ಟೆ ತಣ್ಣಗಾಗಿಸಿತು. ಮದುವೆಯಲ್ಲಿ ಪುಸ್ತಕದ ಅಂಗಡಿ ಜೊತೆಗೆ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಕೂಡ ಏರ್ಪಡಿಸಿದ್ದು ವಿಶೇಷವಾಗಿತ್ತು.