Tuesday, March 17, 2026
ರಾಜಕೀಯಸುದ್ದಿ

ಯತ್ನಾಳ್ ರಾಜ್ಯಾಧ್ಯಕ್ಷ ಹೇಳಿಕೆಗೆ ಪ್ರಭಾಕರ ಕೋರೆ ತಿರುಗೇಟು – ಕಹಳೆ ನ್ಯೂಸ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಇನ್ನೂ ಖಾಲಿಯಾಗಿಲ್ಲ. ಹುದ್ದೆ ತೆರವಾಗುವ ಮೊದಲೇ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಅಂತಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಪ್ರಭಾಕರ ಕೋರೆ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಬಳಿಕ ನಾನೇ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ರು. ಈ ಕುರಿತಂತೆ ನಗರದ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಇನ್ನೂ ಖಾಲಿಯಾಗಿಲ್ಲ. ಅಲ್ಲದೇ, ರಾಜ್ಯಾಧ್ಯಕ್ಷ ಹುದ್ದೆಗೆ ಯತ್ನಾಳ್ ಮಾತ್ರವಲ್ಲ ಹಲವು ಆಕಾಂಕ್ಷಿಗಳಿದ್ದಾರೆ ಅಂತಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

‘ಎಂ.ಬಿ.ಪಾಟೀಲ್ ಬಿಜೆಪಿಗೆ ಬಂದ್ರೂ ಸಿಎಂ ಹುದ್ದೆ ಸಿಗಲ್ಲ’
ಇದೇ ವೇಳೆ ಎಂ.ಬಿ.ಪಾಟೀಲರನ್ನು ಬಿಜೆಪಿಗೆ ಆಹ್ವಾನಿಸುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋರೆ, ಎಂ.ಬಿ.ಪಾಟೀಲರು ಬಿಜೆಪಿಗೆ ಬಂದು ಮಾಡುವುದೇನಿದೆ? ಅವರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ. ಎಂ.ಬಿ.ಪಾಟೀಲರು ಬಿಜೆಪಿಗೆ ಬಂದರೂ ಅವರಿಗೆ ಇಲ್ಲಿ ಮುಖ್ಯಮಂತ್ರಿ ಹುದ್ದೆ ಸಿಗಲ್ಲ ಅಂತಾ ಯತ್ನಾಳ್ ಹೇಳಿಕೆಗೆ ಟಾಂಗ್ ನೀಡಿದ್ರು.

ಜಾಹೀರಾತು
ಜಾಹೀರಾತು