
ಸುಬ್ರಹ್ಮಣ್ಯ ; ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅರಣ್ಯ ಇಲಾಖೆ ವಸತಿ ಕಟ್ಟಡಕ್ಕೆ ಗುದ್ದಿ ಮಗುಚಿ ಬಿದ್ದ ಘಟನೆ ಕೊಂಬಾರು ಗ್ರಾಮ ಕೆಂಜಾಲದಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಮಗುವಿಗೆ ಸ್ವಲ್ಪ ಗಾಯವಾಗಿದ್ದು ಅವರನ್ನು ಸುಬ್ರಹ್ಮಣ್ಯ ಆಸ್ಪತ್ರೆಗೆ ಆಂಬ್ಯುಲೆನ್ ಮೂಲಕ ಕೊಂಡೊಯ್ಯಲಾಗಿದೆ.
ಕಾರ್ ಬೆಂಗಳೂರಿನಿಂದ ಕುಕ್ಕೇ ಸುಬ್ರಹ್ಮಣ್ಯಕ್ಕೇ ಬರುತ್ತಿತ್ತು ಎಂದು ಕಡಬ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಡಬ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

















