Tuesday, March 17, 2026
ಸುದ್ದಿ

ಮತ್ತೆ ಬರಲಿದೆ ದಿ ಗ್ರೇಟ್ ‘ಅಂಬಾಸಿಡರ್’!! – ಕಹಳೆ ನ್ಯೂಸ್

ಕಾರುಗಳು ರಸ್ತೆಯಲ್ಲಿ ಓಡಾಡಲು ಆರಂಭಗೊಂಡ ಕಾಲದಲ್ಲಿ ರಾಜನಂತೆ ಎಲ್ಲೆಡೆ ರಾರಾಜಿಸುತ್ತಿದ್ದ ಕಾರು ಅಂದ್ರೆ ಅದು ‘ಅಂಬಾಸಿಡರ್’. ಪ್ರಯಾಣಿಕರನ್ನು ಕೊಂಡೊಯ್ಯುವುದರಿಂದ ಹಿಡಿದು, ರಾಜಕಾರಣಿಗಳ ದರ್ಬಾರಿನ ಸವಾರಿಗೂ ಅಂದಿನ ಕಾಲದಲ್ಲಿ ಈ ಅಂಬಾಸಿಡರ್ ಕಾರೇ ಬೇಕಿತ್ತು. ಆದರೆ ಕಾಲಕ್ರಮೇಣ ಬೇರೆ ಬೇರೆ ಹೊಸ ಕಾರು ಕಂಪೆನಿಗಳ ಹಾವಳಿಯಲ್ಲಿ ‘ಅಂಬಾಸಿಡರ್’ ನಿಧಾನವಾಗಿ ಮರೆಯಾಗುತ್ತಾ ಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೀಗ ಪುನಃ ‘ಅಂಬಾಸಿಡರ್’ ಕಾರು ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದೆ. ಅದೂ ಕೂಡ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡು ಎಂಬುವುದು ವಿಶೇಷ. ಈ ಸುದ್ದಿಯನ್ನು ಕೇಳುತ್ತಿದ್ದಂತೆ ಕಾರು ಪ್ರಿಯರು ಸಂತಸಗೊಂಡಿದ್ದಾರೆ ಮತ್ತು ಕಾರು ಖರೀದಿಸಲು ಉತ್ಸುಕರಾಗಿದ್ದಾರೆ.

ಜಾಹೀರಾತು
ಜಾಹೀರಾತು

ಮೊನ್ನೆ ತಾನೆ ಹಳೆಯ ಜಾವಾ ಬೈಕ್ ಮತ್ತೆ ಮಾರುಕಟ್ಟೆಗೆ ಬಂದಿರುವುದು ನಮಗೆಲ್ಲರಿಗೆ ಗೊತ್ತೇ ಇದೆ. ಅದಕ್ಕೆ ತಾನೆ ಹೇಳೋದು ಓಲ್ಡ್ ಈಸ್ ಗೋಲ್ಡ್ ಎಂದು. ಅಂದ ಹಾಗೆ ಹೊಸ ನವೀಕೃತ ‘ಅಂಬಾಸಿಡರ್’ ಕಾರಿನ ಬೆಲೆ ಸರಿಸುಮಾರು 5ರಿಂದ 9 ಲಕ್ಷ ರುಪಾಯಿ ಎಂದು ಹೇಳಲಗುತ್ತಿದೆ.