
ಹಾಸನ: ಕುರುಕ್ಷೇತ್ರದ ಡೈಲಾಗ್ ಹೇಳುವುದರ ಮೂಲಕ ಅರಸೀಕರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜನರನ್ನು ರಂಜಿಸಿದ್ದಾರೆ. ಅರಸೀಕೆರೆ ತಾಲ್ಲೂಕಿನ ಬಾಗೇಶಪುರದಲ್ಲಿ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ನಿನ್ನೆ ರಾತ್ರಿ ಕುರುಕ್ಷೇತ್ರ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ನಾಟಕಕ್ಕೂ ಮೊದಲು ವೇದಿಕೆಗೆ ಬಂದ ಶಾಸಕ, ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಬರುವ ಸನ್ನಿವೇಶವೊಂದರ ಭೀಮನ ಡೈಲಾಗ್‍ನ್ನು ಗದೆ ಹಿಡಿದು, ಜನರನ್ನ ಮನರಂಜಿಸಿದ್ರು.














