Thursday, March 19, 2026
ಸುದ್ದಿ

KKR vs KXIP : ಶುಭಮನ್ ಗಿಲ್ ಆಕರ್ಷಕ ಅರ್ಧಶತಕ: ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ನೈಟ್ ರೈಡರ್ಸ್ – ಕಹಳೆ ನ್ಯೂಸ್

ಅಂತಿಮ ಹಂತದಲ್ಲಿ ಮನ್‍ದೀಪ್‍ಸಿಂಗ್ (25) ಹಾಗೂ ಸ್ಯಾಮ್ ಕರ್ರನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಮೂಲಕ ಪಂಜಾಬ್ ತಂಡದ ರನ್ ಗತಿಯನ್ನು ಹೆಚ್ಚಿಸಿದರು.

ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ 52ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಈ ಮೂಲಕ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಂಜಾಬ್ ನೀಡಿದ 183 ರನ್‍ಗಳ ಬೆನ್ನತ್ತಿದ್ದ ನೈಟ್ ರೈಡರ್ಸ್‍ಗೆ ಆರಂಭಿಕರಾದ ಶುಭ್‍ಮನ್ ಗಿಲ್ ಹಾಗೂ ಕ್ರಿಸ್ ಲಿನ್ ಅತ್ಯುತ್ತಮ ಆರಂಭ ಒದಗಿಸಿದರು. ಪವರ್ ಪ್ಲೇನಲ್ಲಿ ಬಿರುಸಿನ ಆಟವಾಡಿದ ಈ ಜೋಡಿ 5 ಓವರ್‌ಗೆ ತಂಡದ ಮೊತ್ತವನ್ನು 50 ರ ಗಡಿ ದಾಟಿಸಿದ್ದರು. ಆದರೆ 6ನೇ ಓವರ್‌ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಕೈ ಹಾಕಿದ ಲಿನ್ (46) ಆಂಡ್ರೊ ಟೈಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ವೇಳೆಗೆ ಲಿನ್-ಗಿಲ್ ಜೋಡಿ ಮೊದಲ ವಿಕೆಟ್‍ಗೆ 62 ರನ್‍ಗಳ ಜೊತೆಯಾಟ ನೀಡಿದ್ದರು.

ಜಾಹೀರಾತು
ಜಾಹೀರಾತು

ಬಳಿಕ ಗಿಲ್ ಜತೆಗೂಡಿದ ರಾಬಿನ್ ಉತ್ತಪ್ಪ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. 10 ಓವರ್‌ಗಳ ವೇಳೆಗೆ ತಂಡದ ಮೊತ್ತವನ್ನು 98 ರನ್‍ಗೆ ತಲುಪಿಸುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು. ಆದರೆ ಈ ಮೊತ್ತಕ್ಕೆ 2 ರನ್ ಸೇರ್ಪಡೆ ಆಗುವಷ್ಟರಲ್ಲಿ ರಾಬಿನ್ ಉತ್ತಪ್ಪ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಅಶ್ವಿನ್ ಎಸೆತದಲ್ಲಿ ಔಟಾಗುವ ಮುನ್ನ ಉತ್ತಪ್ಪ 13 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 22 ರನ್ ಗಳಿಸಿದ್ದರು.