Tuesday, March 17, 2026
ಸುದ್ದಿ

‘ಆರ್.ಆರ್.ಆರ್’ ಜ್ಯೂ.ಎನ್.ಟಿ.ಆರ್‌ಗೆ ನಾಯಕಿ ನಿತ್ಯಾ!?

ಬಾಹುಬಲಿ ಖ್ಯಾತಿಯ ಎಸ್.ಎಸ್.ರಾಜಮೌಳಿ ನಿರ್ದೇಶನದ ಮಲ್ಟಿಸ್ಟಾರರ್ ಚಿತ್ರ ‘ಆರ್.ಆರ್.ಆರ್’ನ ಪಾತ್ರಾವರ್ಗದಲಿ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ತೇಜ, ಜ್ಯೂನಿಯರ್ ಎನ್.ಟಿ.ಆರ್, ಬಾಲಿವುಡ್‍ನ ಅಜಯ್‍ದೇವಗನ್, ರಾಮ್‍ನಾಯಕಿಯ ಪಾತ್ರದಲ್ಲಿ ಅಲಿಯಾ ಭಟ್ ಇದ್ದಾರೆ. ಮತ್ತೋರ್ವ ನಾಯಕಿಯಾಗಿ ಡೈಸಿ ಈದ್ಗರ್ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತನ್ನ ವೈಯಕ್ತಿಕ ಕಾರಣಗಳಿಂದ ಚಿತ್ರತಂಡದಿಂದ ಹೊರನಡೆದಿರುವ ಡೈಸಿಯ ಜಾಗಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಡೈಸಿ ಬದಲು ಜ್ಯೂ.ಎನ್.ಟಿ.ಆರ್‌ಗೆ ನಾಯಕಿಯಾಗಿ ಪಂಚಭಾಷಾ ತಾರೆ ನಿತ್ಯಾ ಮೆನನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇನ್ನೊಂದೆಡೆ ಆ ಜಾಗಕ್ಕೆ ಬಾಲಿವುಡ್‍ನಿಂದ ಜಾಕ್ವೆಲಿನ್ ಫೆರ್ನಾಂಡಿಸನ್ನು ಆಯ್ಕೆ ಮಾಡಬಹುದು ಎಂಬ ಮಾತೂ ಇದೆ.

ಜಾಹೀರಾತು
ಜಾಹೀರಾತು

ನಿತ್ಯಾ ಮೆನನ್ ಇಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಹುಡುಗಿಯ ಪಾತ್ರವನ್ನು ಮಡಲಿದ್ದಾರೆ. ‘ಆರ್.ಆರ್.ಆರ್’ ಚಿತ್ರದ ಕಥೆಯು ಸ್ವಾತಂತ್ರ್ಯ ಪೂರ್ವದ ಘಟನೆಗಳನ್ನಾಧರಿಸಿದೆ. ಈಗಾಗಲೇ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು. ಪುಣೆ ಶೆಡ್ಯೂಲ್‍ನಲ್ಲಿ ಅಜಯ್‍ದೇವಗನ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.