Tuesday, March 17, 2026
ಸುದ್ದಿ

ಉಪ್ಪಿನಂಗಡಿ ಗೃಹರಕ್ಷಕದಳ ಘಟಕಕ್ಕೆ ಭೇಟಿ ನೀಡಲಿರುವ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆಯ ಜಿಲ್ಲಾ ಕಮಾಂಡೆಂಟ್ – ಕಹಳೆ ನ್ಯೂಸ್

ಉಪ್ಪಿನಂಗಡಿ ;ಗೃಹರಕ್ಷಕದಳ ಘಟಕಕ್ಕೆ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆಯ ಜಿಲ್ಲಾ ಕಮಾಂಡೆಂಟ್ ಭೇಟಿ ನೀಡಲಿದ್ದಾರೆ. ದಿನಾಂಕ 5-05-2019ರಂದು ಬೆಳಿಗ್ಗೆ 8:30ಕ್ಕೆ ಉಪ್ಪಿನಂಗಡಿ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆಯ ಜಿಲ್ಲಾ ಕಮಾಂಡೆಂಟ್ ಡಾ||ಮುರಲಿ ಮೋಹನ್ ಚೂಂತಾರುರವರು ಭೇಟಿಯಾಗಿ ಕವಾಯತು ವೀಕ್ಷಣೆ ಹಾಗೂ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ ಹಾಗೂ ಮುಂಬರುವ ಮುಂಗಾರು ಮಳೆಯ ವೇಳೆ ನಡೆಯುವ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಘಟಕದಿಂದ ಪ್ರವಾಹ ರಕ್ಷಣಾ ಸಭೆ ನಡೆಸಿ ಗೃಹರಕ್ಷಕರ ಪ್ರವಾಹ ತಂಡ ರಚಿಸಲ್ಲಿದ್ದಾರೆ ಎಂದು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಹಾಗೂ ASL ದಿನೇಶ್. ಬಿ. ತಿಳಿಸಿದ್ದಾರೆ.

2018ರಲ್ಲಿ ಉಪ್ಪಿನಂಗಡಿ ಗೃಹರಕ್ಷಕ ಘಟಕದಿಂದ ಪ್ರವಾಹ ರಕ್ಷಣಾ ತಂಡ ಕ್ಕೆ ಉಪ್ಪಿನಂಗಡಿ ದೇವಾಲಯದ ಸ್ನಾನ ಘಟ್ಟದ ಬಳಿ ಕರ್ತವ್ಯ ನಿರ್ವಹಿಸಿದ್ದಕ್ಕೆ ಕೇಂದ್ರ ಕಚೇರಿಯಿಂದ ಪುರಸ್ಕಾರ ಹಾಗೂ ನಗದು ಪುರಸ್ಕಾರ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು